ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹೆಸರು ಮಾಡಿರುವ ಈ ವೃದ್ಧೆ ಈಗ ಮತ್ತೆ ತನ್ನ ಡ್ಯಾನ್ಸ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸಿಂಗ್ ದಾದಿ ಅಂತಲೇ ಫೇಮಸ್ ಆಗಿರುವ 63 ವರ್ಷದ ರವಿ ಬಾಲಾ ಶರ್ಮಾ ಅವರು ತಮ್ಮ ಡ್ಯಾನ್ಸ್ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾರೆ. ತನ್ನದೇ ಆದ ಅಭಿಮಾನಿ ಬಳಗವನ್ನೂ ಹೊಂದಿದ್ದಾರೆ. ಹೀಗಾಗಿ, ಇವರು ಅಪ್ಲೋಡ್ ಮಾಡುವ ಒಂದೊಂದು ನೃತ್ಯದ ವೀಡಿಯೋಗಳೂ ಬಹುಬೇಗ ಎಲ್ಲರನ್ನೂ ಸೆಳೆಯುತ್ತವೆ. ಇದೀಗ ಪಂಜಾಬೀ ಹಿಟ್ ಸಾಂಗ್ ಬಿಜ್ಲೀ ಬಿಜ್ಲೀಗೆ ಹೆಜ್ಜೆ ಹಾಕುವ ಮೂಲಕ ಅಭಿಮಾನಿಗಳ ಪಾಲಿನ ಸಿಂಡ್ರೆಲಾ ಆಗಿದ್ದಾರೆ. ಈ ಸಾಂಗ್ಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿ, ವಯಸ್ಸು ಅನ್ನೋದು ಬರೀ ಸಂಖ್ಯೆಯಷ್ಟೇ ಅನ್ನೋದನ್ನ ಮತ್ತೆ ಪ್ರೂವ್ ಮಾಡಿದ್ದಾರೆ.
PublicNext
19/12/2021 04:33 pm