ಸಂಗೀತಕ್ಕೆ ದೇಶ, ಭಾಷೆ, ಗಡಿ ಅಂತರವಿಲ್ಲ ಅದು ಸಾರ್ವತ್ರಿಕ ಭಾಷೆ. ನಮ್ಮ ದೇಶದ ಹಾಡಲ್ಲದ ಇತರ ದೇಶದ ಹಾಡಿಗೆ ನಾವು ಅದೇಷ್ಟೋ ಬಾರಿ ಮನಸೋತಿರುತ್ತೇವೆ.
ಅದೇ ರೀತಿ ನಮ್ಮ ದೇಶದ ಸಂಗೀತಕ್ಕೆ ವಿದೇಶಿಗರು ಫಿದಾ ಆಗಿರುತ್ತಾರೆ. ಸದ್ಯ ತಾಂಜಾನಿಯಾದ ಅಣ್ಣ ತಂಗಿ ಬಾಲಿವುಡ್ ಹಾಡಿಗೆ ಮನಸೋತು ಎಲ್ಲರನ್ನು ಮಂತ್ರಮುಗ್ಧರನ್ನಾಗುವಂತೆ ಪ್ರದರ್ಶನ ನೀಡಿದ ಅದ್ಭುತ ವಿಡಿಯೋವೊಂದು ವೈರಲ್ ಆಗಿದೆ.
ಸಾಂಪ್ರದಾಯಿಕ ಮಾಸಾಯಿ ಉಡುಪನ್ನು ಧರಿಸಿರುವ ಟಿಕ್ ಟಾಕ್ ಬಳಕೆದಾರ ಕಿಲಿ ಪಾಲ್ ಮತ್ತು ಅವರ ಸಹೋದರಿ ನೀಮಾರ ಬಾಲಿವುಡ್ ನ ಶೇರ್ ಶಾ ಚಿತ್ರದ ಸೂಪರ್ ಹಿಟ್ ಹಾಡಿಗೆ ಮೈಮರೆತು ಅಭಿನಯಿಸಿ ನೆಟ್ಟಿಗರ ಮನ ಗೆದ್ದಿದ್ದಾರೆ.
ಕಿಲಿ ಪಾಲ್ ಆಫ್ರಿಕನ್ ರಾಷ್ಟ್ರಗಳಲ್ಲಿ ಸಾಂಪ್ರದಾಯಿಕ ಉಡುಪನ್ನು ಧರಿಸಿ ನೃತ್ಯ ಮಾಡುವ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ.
PublicNext
29/11/2021 02:29 pm