ಮದುವೆ ಅಂದ್ರೆ ಸಂಭ್ರಮ. ಮದುವೆ ಅಂದ್ರೆ ಖುಷಿ. ಮದುವೆ ಅಂದ್ರೆ ಸಡಗರ. ಈ ಮದುವೆಗಾಗಿ ಅನೇಕರು ತಮ್ಮದೇ ರೀತಿಯಲ್ಲಿ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸುತ್ತಾರೆ. ಆದರೆ ಇಲ್ಲೊಬ್ಬ ಯುವತಿ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಲೇ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದ್ದಾಳೆ. ಈ ವೀಡಿಯೋ ಈಗ ಭಾರಿ ವೈರಲ್ ಆಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಈ ವೀಡಿಯೋ ಹೆಚ್ಚು ಗಮನ ಸೆಳೆಯುತ್ತಿದೆ. ಮದುವೆ ಉಡುಗೆಯಲ್ಲಿಯೇ ಅದ್ಭುವಾಗಿ ಕಾಣಿಸಿಕೊಂಡಿರೋ ಹುಡುಗಿ, ಇಲ್ಲಿ ವರ್ಕೌಟ್ ಮಾಡ್ತಿದ್ದಾಳೆ. ಈ ವಿಶೇಷ ಪ್ರೀ ವೆಡ್ಡಿಂಗ್ ಫೋಟೋ ಶೂಟ್‌ನ ವೀಡಿಯೋವನ್ನ ಅನು ಸೆಹಗಲ್ ಅನ್ನೋರು ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ. ಗಂಡ ಮತ್ತು ಅತ್ತೆಗೆ ತನ್ನ ಪವರ್ ತೋರಲೆಂದೇ ಈ ವರ್ಕೌಟ್ ಮಾಡಿದ್ದಾಳೆ ಅಂತಲೂ ತಮಾಷೆಯಾಗಿಯೇ ಬರೆದಿದ್ದಾರೆ.
PublicNext
22/11/2021 07:15 pm