ಮೈಸೂರು: ಕಾಡಿನಿಂದ ನಾಡಿಗೆ ಬರಲು ಗಜರಾಜ ಸಾಹಸಪಟ್ಟು ಯಶಸ್ವಿಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಓಂಕಾರ ವಲಯದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಆನೆಗಳು ಕಾಡಿನಿಂದ ನಾಡಿಗೆ ಬರದಂತೆ ರೈಲ್ವೆ ಕಂಬಿಗಳ ತಡೆಗೋಡೆ ನಿರ್ಮಿಸಲಾಗಿದೆ. ಆದರೆ ಈ ಚಾಣಾಕ್ಷ ಆನೆ ತಡೆಗೋಡೆಯನ್ನೇ ದಾಟಿ ನಾಡಿನ ಕಡೆಗೆ ಎಂಟ್ರಿ ಕೊಟ್ಟಿದೆ. ಈ ಹಿಂದೆ ಹೀಗೆ ಸಾಹಸಕ್ಕೆ ಮುಂದಾಗಿ ಆನೆಯೊಂದು ಪ್ರಾಣ ಕಳೆದುಕೊಂಡಿತ್ತು.
PublicNext
17/11/2021 11:33 am