ಸದ್ಯ ಡಿಜಿಟಲ್ ಕಾಲ ಎಲ್ಲಿ ನೋಡಿದ್ರಲ್ಲಿ ಗೂಗಲ್ ಫೆ, ಫೋನ್ ಫೆ, ಕಾರ್ಡ್ ಹೀಗೆ ದುಡ್ಡು ಇಟ್ಟುಕೊಂಡು ಓಡಾಡುವರು ತೀರಾ ಕಡಿಮೆಯಾಗಿದ್ದಾರೆ.
ಹಾಗಾಗಿಯೇ ಈಗಾ ಕಾಲ ಕ್ರಮೇಣ ಎಲ್ಲರೂ ಡಿಜಿಟಲ್ ಜಮಾನಕ್ಕೆ ಒಗ್ಗುತ್ತಿದ್ದಾರೆ. ಸದ್ಯ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರು ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನಾ ಹಂಚಿಕೊಂಡಿದ್ದಾರೆ.
20,10 ರೂ.ಗಳನ್ನು ಜನ ಈಗಾ ಡಿಜಿಟಲ್ ಮುಖಾಂತರವೇ ಪಾವತಿಸುತ್ತಿದ್ದಾರೆ. ಒಟ್ಟಿನಲ್ಲಿ ದೇಶದಲ್ಲಿ ಡಿಜಿಟಲ್ ಪಾವತಿ ಜನಪ್ರಿಯವಾಗಿದೆ ಎಂಬುದಕ್ಕೆ ಬೆಸ್ಟ್ ಉದಾಹರಣೆ ಈ ವಿಡಿಯೋ
ಹೌದು ಬಸವನನ್ನು (ಎತ್ತು) ಹಿಡಿದುಕೊಂಡು ಬೀದಿಬೀದಿ ಸುತ್ತುವ ವ್ಯಕ್ತಿಯೊಬ್ಬ ಸ್ಮಾರ್ಟ್ ಆಗಿ ದೇಣಿಗೆ ಸಂಗ್ರಹಿಸಲು ಅನುಕೂಲವಾಗುವಂತೆ ಬಸವನ ತಲೆ ಮೇಲೆ ಯುಪಿಐ ಸ್ಕ್ಯಾನರ್ ಅಳವಡಿಸಿದ್ದಾರೆ.
ಸದ್ಯ ಈ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು ಇಂಡಿಯಾ ಸ್ಮಾರ್ಟ್ ಆಗುತ್ತಿದೆ.
PublicNext
08/11/2021 04:23 pm