ಮೊದಲ ಮದುವೆ ಅಮೃತ. ಎರಡನೇ ಮದುವೆ ಸಾಹಸ. ಮೂರನೇ ಮದುವೆ ದುರಂತ. ಇದು ಸಾಧ್ಯವೆ. ಮೋಸ ಮಾಡೋ ಖದೀಮರಿಗೆ ಇದು ಸಾಧ್ಯ ಬಿಡಿ. ಪ್ರತಿಯೊಬ್ಬರಿಗೂ ಎರಡನೇ ಚಾನ್ಸ್ ಸಿಗಬೇಕು ಅನ್ನೋದು ಎಲ್ಲರೂ ಹೇಳೋ ಒಂದು ಮಾತು. ಅದನ್ನ ಇಲ್ಲೊಬ್ಬ ತುಂಬಾ ಸೀರಿಯೆಸ್ ಆಗಿಯೇ ತೆಗೆದುಕೊಂಡಂತಿದೆ. ಅದಕ್ಕೇನೆ ಸೆಕೆಂಡ್ ಮ್ಯಾರೇಜ್ ಬ್ಯೂರೋನೇ ಓಪನ್ ಮಾಡಿದ್ದಾನೆ.
ಹೌದು ಇದು ಸುಳ್ಳಲ್ಲ ನಿಜ. ಸೋಷಿಯಲ್ ಮೀಡಿಯಾದಲ್ಲಿ ಈ ಒಂದು ಪೋಟೋ ಹೆಚ್ಚು ಗಮನ ಸೆಳೆಯುತ್ತಿದೆ.ಸಕೆಂಡ್ ಮ್ಯಾರೇಜ್ ಬ್ಯೂರೋ ಅಂತಲೇ ಬೋರ್ಡ್ ಕೂಡ ಇದೆ. ಜೊತೆಗೆ ಎರಡನೇ ಮದುವೆ ಆಗೋಕೆ ಯಾರಿಗೆಲ್ಲ ಚಾನ್ಸ್ ಇದೆ ಅಂತಲೂ ಬ್ಯೂರೋ ಅಕ್ಕ-ಪಕ್ಕದ ಗೋಡೆ ಮೇಲೆ ಬರೆಸಲಾಗಿದೆ. ಬ್ಯೂರೋ ಹೆಡ್ ಯಾರೂ ಅಂತ ಗೊತ್ತಿಲ್ಲ.ಪೋನ್ ನಂಬರ್ ಬೋರ್ಡ್ ಮೇಲೇನೆ ಇದೆ. ಬೇಕಾದ್ರೆ ಸಂಪರ್ಕಿಸಿ.
PublicNext
17/10/2021 08:00 pm