ನಿನ್ನೆ ಶನಿವಾರ ಇಡೀ ದೇಶಾದ್ಯಂತ ಗಾಂಧಿ ಜಯಂತಿ ಆಚರಿಸಲಾಗಿದೆ. ಈ ವೇಳೆ. ಕೆಲವೆಡೆ ಅಚ್ಚರಿ ಹಾಗೂ ವಿನೋದ ಎನಿಸುವ ಘಟನೆಗಳು ನಡೆದಿವೆ.
ಸಮಾಜವಾದಿ ಪಕ್ಷದ ಮುಖಂಡರೊಬ್ಬರು ಬಾಪೂ ಎಂದು ಉದ್ಗರಿಸುತ್ತ ಪ್ರತಿಮೆ ಹಿಡಿದು ಗಳಗಳನೇ ಅತ್ತಿದ್ದಾರೆ. ಅದೇ ರೀತಿ ವೈರಲ್ ಆಗುತ್ತಿರುವ ಇನ್ನೊಂದು ವಿಡಿಯೋದಲ್ಲಿ ಬಾಪೂ ಪ್ರತಿಮೆಗೆ ನಮಸ್ಕರಿಸಿ ಕಣ್ಣೀರಿಟ್ಟಿದ್ದಾರೆ. ಹಾಗೂ ನೀವು ನಮ್ಮನ್ನು ಬಿಟ್ಟು ಯಾಕೆ ಹೋದಿರಿ ಬಾಪೂ? ಇಷ್ಟು ದೊಡ್ಡ ದೇಶಕ್ಕೆ ತಾವು ಸ್ವಾತಂತ್ರ್ಯ ತಂದು ಕೊಟ್ಟಿರಿ. ಆದರೆ ಈಗ ನಮ್ಮ ಪರಿಸ್ಥಿತಿ ಮೊದಲಿನಂತೆಯೇ ಆಗಿದೆ ಎನ್ನುತ್ತ ಕಣ್ಣೀರಿಟ್ಟಿದ್ದಾರೆ. ಈ ಎರಡೂ ವಿಡಿಯೋಗಳೂ ಈಗ ವೈರಲ್ ಆಗುತ್ತಿವೆ.
PublicNext
03/10/2021 03:28 pm