ರೈಲು ಹಳಿ ದಾಟುವಾಗ ಎಷ್ಟು ಜಾಗೃತರಾಗಿರಬೇಕು ಅಂದ್ರೆ ಮೈಯಲ್ಲಾ ಕಣ್ಣಾಗಿರಬೇಕು ಕೊಂಚ ಯಾಮಾರಿದರೂ ನಡೆಯುವುದೇ ಬೇರೆ..
ಇಲ್ಲೊಂದು ರೈಲ್ವೆ ಟ್ರಾಕ್ ಮೇಲೆ 18 ಚಕ್ರಗಳ ಟ್ರಕ್ ವಿಂಡ್ ಟರ್ಬೈನ್ ಬ್ಲೇಡ್ ಅನ್ನು ಹೊತ್ತು ಸಾಗುತ್ತಿತ್ತು. ಆದರೆ, ರೈಲು ಡಿಕ್ಕಿಯಾಗಿ ಟ್ರಕ್ ಉರುಳಿ ಬಿದ್ದಿದೆ. ಸದ್ಯ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಟೆಕ್ಸಾಸ್ ನ ಲುಲ್ಲಿಂಗ್ ನಗರದಲ್ಲಿ ನಡೆದ ಘಟನೆ ಇದಾಗಿದ್ದು ಬೃಹತ್ ಟ್ರಕ್ ರೈಲ್ವೇ ಗೇಟ್ ಅನ್ನು ನಿಧಾನಕ್ಕೆ ದಾಟುವುದಕ್ಕೂ ರೈಲು ಬರುವ ಸಮಯವೂ ಒಂದೇ ಆಗಿದೆ. ಟ್ರಕ್ ಹಳಿ ದಾಟುತ್ತಿದ್ದಂತೆಯೇ ಗೇಟ್ ಕೂಡಾ ಬಿದ್ದಿತ್ತು. ಆದರೆ, ಟ್ರಕ್ ಚಾಲಕನಿಗೆ ನಿರೀಕ್ಷೆ ಮಾಡಿದಷ್ಟು ವೇಗದಲ್ಲಿ ಹಳಿ ದಾಟಲು ಸಾಧ್ಯವಾಗಲಿಲ್ಲ.
ಹೀಗಾಗಿ, ರೈಲು ಬಂದು ಟ್ರಕ್ ಗೆ ಡಿಕ್ಕಿ ಹೊಡೆದು ಟ್ರಕ್ ಉರುಳಿ ಬಿದ್ದಿದೆ. ಈ ಭಯಾನಕ ದೃಶ್ಯವನ್ನು ನೋಡಿದ್ದ ಕೆಲವರು `ಓ ಮೈ ಗಾಡ್' ಎಂದಿದ್ದಾರೆ.
ಅಮೇರಿಕಾದ ಮಾಜಿ ಬಾಸ್ಕೆಟ್ ಬಾಲ್ ಆಟಗಾರ ರೆಕ್ಸ್ ಚಾಪ್ಮನ್ ಈ ವಿಡಿಯೋವನ್ನು ರೀಟ್ವೀಟ್ ಮಾಡಿದ್ದಾರೆ.
PublicNext
30/08/2021 05:03 pm