ಬೆಂಕಿ ಹತ್ತಿ ಉರಿಯುತ್ತಿದ್ದ ಕಟ್ಟಡದಲ್ಲಿ ಸಿಲುಕಿದ್ದ ಇಬ್ಬರು ಮಕ್ಕಳನ್ನು ಯುವಕರು ಮಾನವ ಸರಪಳಿ ಮೂಲಕ ರಕ್ಷಿಸಿದ ಘಟನೆ ಚೀನಾದಲ್ಲಿ ನಡೆದಿದ್ದು, ರಕ್ಷಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚೀನಾದ ಹುನಾನ್‌ನ ಕ್ಸಿಂಟಿಯನ್‌ನಲ್ಲಿನ ಕಟ್ಟಡದ ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕಟ್ಟಡದಿಂದ ಹೊರಗೆ ಬರಲು ಸಾಧ್ಯವಾಗದೆ ಇಬ್ಬರು ಮಕ್ಕಳು ಸಿಲುಕಿದ್ದರು. ಇದನ್ನು ಗಮನಿಸಿದ ಆರು ಜನ ಯುವಕರು ರಕ್ಷಣಾ ಕಾರ್ಯಕ್ಕೆ ಮುಂದಾದರು. ಕಟ್ಟಡದ ಗೋಡೆಗಳ ಉದ್ದಕ್ಕೂ ಒಬ್ಬರ ಕೆಳಗೆ ಒಬ್ಬರು ನಿಂತು ಮಕ್ಕಳನ್ನು ರಕ್ಷಿಸಲು ಮಾನವ ಸರಪಳಿಯನ್ನು ರೂಪಿಸಿದರು. ಬಳಿಕ ನಿಧಾನವಾಗಿ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.
ಈ ರಕ್ಷಣಾ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
PublicNext
25/08/2021 04:33 pm