ಸಂಚಾರಿ ನಿಯಮಗಳನ್ನು ಪಾಲಿಸುವುದು ಎಲ್ಲರ ಆದ್ಯ ಕರ್ತವ್ಯ ಆದರೆ ಇತ್ತಿಚ್ಚೆಗೆ ಕೆಲವರಿಗೆ ರಸ್ತೆ ನಡವೆ ಸ್ಟಂಟ್ ಮಾಡುತ್ತಾ ಇರುವುದು ಒಂಥರಾ ಶೋಕಿಯಾಗಿದೆ.
ಹೈದರಾಬಾದ್ ನ ಮಾದಾಪುರ ಪ್ರದೇಶದಲ್ಲಿರುವ ದುರ್ಗಂ ಚೆರುವು ಕೇಬಲ್ ಸೇತುವೆ ಮೇಲೆ ವ್ಯಕ್ತಿಯೊಬ್ಬರು ಕುಣಿಯುತ್ತಿರುವ ವಿಡಿಯೋವನ್ನು ಸೈಬರಾಬಾದ್ ಸಂಚಾರಿ ಪೊಲೀಸರು ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ವಾಹನ ದಟ್ಟನೆ ಮಧ್ಯೆಯೇ ಬಂದ ಈತ, ವಾಹನಗಳೆಲ್ಲಾ ಖಾಲಿಯಾದ ಮೇಲೆ ಡ್ಯಾನ್ಸ್ ಮಾಡಿದ್ದಾನೆ. "ದಯವಿಟ್ಟು ರಸ್ತೆ ಮೇಲೆ ಸ್ಟಂಟ್ ಗಳು ಹಾಗೂ ಡ್ಯಾನ್ಸ್ ಮಾಡಬೇಡಿ," ಎಂದು ಸೈಬರಾಬಾದ್ ಪೊಲೀಸರು ಟ್ವೀಟ್ ಮೂಲಕ ವಿನಂತಿಸಿಕೊಂಡಿದ್ದಾರೆ.
PublicNext
09/08/2021 03:40 pm