ವಿವಾಹ ಎಂದರೇನೇ ಸಡಗರ. ಹೊಸ ಜೀವನಕ್ಕೆ ಕಾಲಿಡುವ ನವಜೋಡಿಯ ಖುಷಿಗೆ ಪಾರವೇ ಇರುವುದಿಲ್ಲ.
ಹೀಗಾಗಿ, ವಿವಾಹದ ಸಂದರ್ಭದಲ್ಲಿ ಖುಷಿಯ ವಾತಾವರಣ ಮನೆ ಮಾಡಿರುತ್ತದೆ. ಸಂಬಂಧಿಕರು, ಸ್ನೇಹಿತರೆಲ್ಲಾ ಸೇರಿ ಆನಂದದಿಂದ ಕಳೆಯುವ ಸುಂದರ ಕ್ಷಣದಲ್ಲಿ ಹಾಡು, ಡಾನ್ಸ್ ಖುಷಿಯನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತದೆ.
ಈ ಜೋಶ್ ನಲ್ಲಿ ವರ ವಧುವನ್ನು ಹೊತ್ತು ಡಾನ್ಸ್ ಮಾಡುವಾಗ ಸೆರೆಯಾದ ದೃಶ್ಯವಿದು. ಇನ್ ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಹಸೆಮಣೆ ಏರುತ್ತಿರುವ ಜೋಡಿ ಖುಷಿಯಿಂದ ಡಾನ್ಸ್ ಮಾಡುತ್ತಾ ಎಲ್ಲರ ಕಣ್ಮನ ಸೆಳೆಯುತ್ತಿರುತ್ತಾರೆ, ಒಂದು ಹಂತದಲ್ಲಿ ಡಾನ್ಸ್ ನ ಜೋಶ್ ನಲ್ಲಿ ವರ ವಧುವನ್ನು ಹೊತ್ತು ಕುಣಿಯಲು ಮುಂದಾಗಿ, ಸಮತೋಲನ ತಪ್ಪಿ ಬಿಳುತ್ತಾರೆ. ಈ ವೇಳೆ ಸುಧಾರಿಸಿಕೊಂಡು ಡಾನ್ಸ್ ಮುಂದುವರಿಸಿರುವುದು ದೃಶ್ಯದಲ್ಲಿದೆ.
ವರ ಬೀಳುತ್ತಿದ್ದಂತೆಯೇ ಭುಜದಲ್ಲಿದ್ದ ವಧು ನಗುತ್ತಾಳೆ. ಆದರೆ, ಡಾನ್ಸ್ ಮುಂದುವರಿಸಿದ ವರ `ಏನೂ ತೊಂದರೆಯಾಗಿಲ್ಲ' ಎಂಬಂತೆ ಕೈ ಸನ್ನೆ ಮಾಡುತ್ತಾರೆ.
ಒಟ್ಟಿನಲ್ಲಿ ವೈರಲ್ ಆದ ವಿಡಿಯೋ ಎಲ್ಲರ ಮೊಗದಲ್ಲಿ ನಗು ಅರಳಿಸಿದೆ.
PublicNext
30/07/2021 03:59 pm