ಸಾಧನೆಗೆ ವಯಸ್ಸು ಬರೀ ಸಂಖ್ಯೆ ಈ ಮಾತನ್ನು 78 ವೃದ್ಧೆ ಸಾಬೀತು ಮಾಡಿದ್ದಾರೆ. ಯುವಕ ಯುವತಿಯರನ್ನೇ ನಾಚಿಸುವಂತೆ ಅಜ್ಜಿ ಭರ್ಜರಿಯಾಗಿಯೇ ಡಾನ್ಸ್ ಮಾಡಿದ್ದಾರೆ. ಈ ಕುರಿತ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನೇಪಾಳದ 78 ವರ್ಷದ ಮಹಿಳೆಯೊಬ್ಬರು ಈಗ ತಮ್ಮ ನೃತ್ಯ ಕೌಶಲ್ಯದಿಂದಲೇ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಈ ವೃದ್ಧೆಯ ಹೆಸರು ಕೃಷ್ಣ ಕುಮಾರಿ ತಿವಾರಿ. ಇವರು ಟಿಕ್ ಟಾಕ್ ನಲ್ಲಿ ತಮ್ಮದೇ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸದ್ಯ ಇವರು ಡಾನ್ಸ್ ಮಾಡುವ ಟಿಕ್ ಟಾಕ್ ದೃಶ್ಯ ಯುಟ್ಯೂಬ್ ನಲ್ಲಿ ಅಪ್ಲೋಡ್ ಆಗಿದ್ದು, ಸಖತ್ ವೈರಲ್ ಆಗುತ್ತಿದೆ. ಮ್ಯೂಸಿಕ್ ಗೆ ಈ ಅಜ್ಜಿ ಸ್ಟೆಪ್ಸ್ ಹಾಕುವ ರೀತಿ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುವಂತಿದೆ.
ಬದುಕನ್ನು ಖುಷಿಯಿಂದ ಸ್ವೀಕರಿಸಿದರೆ ಪ್ರತಿಕ್ಷಣವೂ ಖುಷಿಯಿಂದಲೇ ತುಂಬಿರುತ್ತದೆ ಎಂಬುದಕ್ಕೆ ಇದು ನಿದರ್ಶನವಾಗಿದೆ.
PublicNext
30/07/2021 09:46 am