ಮೊಬೈಲ್, ಕಂಪ್ಯೂಟರ್ ಮುಂದೆ ವಿಡಿಯೋ ಗೇಮ್ ಆಡುವ ಕಾಲ ಈಗ ಶುರುವಾಗಿದೆ. ಪರಿಣಾಮ ಅಂಗಳದಲ್ಲಿ ಆಟವಾಡುವ ಬಾಲಕರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಮಧ್ಯೆ ಮಹಿಳೆಯರ ಗುಂಪೊಂದು ತಮ್ಮ ಬಾಲ್ಯದ ಆಟವಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋ ನೋಡಿದ ಅನೇಕರು ತಮ್ಮ ಬಾಲ್ಯವನ್ನು ನೆನೆದು ಕಮೆಂಟ್ ಮಾಡಿದ್ದಾರೆ. "ನಮಗೆ ವಯಸ್ಸಾಗಿದೆ ಅಂತ ಆಟವಾಡುವುದನ್ನು ನಿಲ್ಲಿಸಬಾರದು. "ನಾವು ಆಟವಾಡುವುದನ್ನು ನಿಲ್ಲಿಸಿದರೆ ಬಹುಬೇಗ ವೃದ್ಧಾಪ್ಯಕ್ಕೆ ಕಾಲಿಡುತ್ತೇವೆ. ಆಟವಾಡುತ್ತಾ ಸಾಗಿದರೆ ವೃದ್ಧಾಪ್ಯವನ್ನು ಬೇಗ ತಲುವುದಿಲ್ಲ" ಎಂಬ ಜಾರ್ಜ್ ಬರ್ನಾರ್ಡ್ ಷಾ ಅವರ ಮಾತನನ್ನು ನೆಟ್ಟಿಗರು ಸ್ಮರಿಸಿದ್ದಾರೆ.
PublicNext
29/07/2021 04:42 pm