ಸಾಮಾಜಿಕ ಜಾಲತಾಣದಲ್ಲಿ ಅನೇಕರು ತಮ್ಮ ಟ್ಯಾಲೆಂಟ್, ವಿಶೇಷ ತೋರಿಸುತ್ತಾರೆ. ಅದರಂತೆ ಯುವತಿಯೊಬ್ಬಳು ನಿಮಗೂ ಹೀಗಾಗುತ್ತಾ ಎಂದು ಪ್ರಶ್ನಿಸಿ ನೆಟ್ಟಿಗರನ್ನು ಆಶ್ಚರ್ಯಕ್ಕೆ ಗುರಿಯಾಗಿಸಿದ್ದಾರೆ.
ಅಮೆರಿಕದ ಮಿನ್ನೇಸೋಟದ ಯುವತಿ ಟಿಕ್‌ಟಾಕ್ ವಿಡಿಯೋವೊಂದರಲ್ಲಿ ತನ್ನ ಕಂಕುಳಿನಿಂದ ಹಾಲನ್ನು ಜಿಗಿಸುತ್ತೇನೆಂದು ಪ್ರಯೋಗ ಮಾಡಿ ತೋರಿಸಿದ್ದಾರೆ. ಈ ವಿಡಿಯೋವನ್ನು ಜನವರಿ ತಿಂಗಳಿನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿತ್ತು. ಆದರೆ ಅದು ಈಗ ಸಖತ್ ವೈರಲ್ ಆಗುತ್ತಿದೆ.
''ನನ್ನ ದೇಹದಲ್ಲಿ ನಡೆಯುತ್ತಿರುವ ಈ ವಿಶೇಷ ಬದಲಾವಣೆಯನ್ನು ಗುರುತಿಸಿರುವೆ. ಇದು ನನ್ನ ದೇಹದೊಳಗೆ ಮಾತ್ರ ನಡೆಯುತ್ತದೆಯೋ? ಅಥವಾ ಬೇರೆಯವರಲ್ಲಿಯೂ ಆಗುತ್ತದೆಯೋ ಎನ್ನುವ ಬಗ್ಗೆ ನನಗೆ ತಿಳಿದಿಲ್ಲ. ನೋಡಿ ನಾನು ಹೇಗೆ ಕಂಕುಳಿನಿಂದ ಹಾಲನ್ನು ಜಿಗಿಸುತ್ತೇನೆ'' ಎಂದು ಯುವತಿ ಹೇಳಿರುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ.
PublicNext
22/02/2021 06:36 pm