ಹಾವು ಕಂಡ್ರೆ ಸಾಕು ಮಾರುದ್ದ ಹಾರುತ್ತೇವೆ. ಇನ್ನು ನೀರಿನಲ್ಲಿ ಬಿದ್ದ ಹಾವನ್ನು ರಕ್ಷಣೆ ಮಾಡೋದು ಅಂದ್ರೆ ದೂರದ ಮಾತು. ಆದರೆ ಯುವಕರ ತಂಡವೊಂದು ಜೀವನದ ಹಂಗು ತೊರೆದು ನಾಗರಹಾವನ್ನು ಯಶಸ್ವಿಯಾಗಿ ರಕ್ಷಣೆ ಮಾಡಿದ್ದಾರೆ. ಈ ಮೈನವಿರೇಳಿಸುವ ಸಾಹಸದ ದೃಶ್ಯವನ್ನು ನೋಡಿದರೆ ಅಬ್ಬಾ ಎನ್ನುವಂತಿದೆ. ಯುವಕರು ಹಾವು ರಕ್ಷಣೆಗಾಗಿ ಮಾಡಿರುವ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಜಮೀನಿನ ಮಧ್ಯೆ ಇದ್ದ ಬಾವಿಗೆ ಬಿದ್ದಿದ್ದ ಹಾವು ಮೇಲೆ ಹತ್ತಲು ಸಾಧ್ಯವಾಗದೆ ಪರದಾಡುತ್ತಿತ್ತು. ಇದನ್ನು ಗಮನಿಸಿದ ಯುವಕರು ರಕ್ಷಣೆಗೆ ಮುಂದಾಗಿದ್ದರು. ಮೊದಲು ನೀರಿಗೆ ಬಿದ್ದ ಓರ್ವ ಯುವಕ ನಿಧಾನವಾಗಿ ಹಾವು ಮತ್ತೊಬ್ಬ ಗೆಳೆಯ ಬಳಿಗೆ ಬರುವಂತೆ ಮಾಡಿದ್ದಾರೆ. ಈ ಮೂಲಕ ಬಾಲವನ್ನು ಎತ್ತಿ ರಕ್ಷಣೆ ಮಾಡಿದ್ದಾರೆ. 4 ನಿಮಿಷ 31 ಸೆಕೆಂಡ್‌ಗಳ ಈ ವಿಡಿಯೋ ಕ್ಲಿಪ್‌ನಲ್ಲಿ ಯುವಕರು ಹೇಗೆ ತಮ್ಮ ಪ್ರಾಣದ ಹಂಗು ತೊರೆದು ಹಾವಿನ ರಕ್ಷಣಾ ಕಾರ್ಯಾಚರಣೆ ನಡೆಸಿದರು ಎಂಬುದನ್ನು ವೀಕ್ಷಿಸಬಹುದಾಗಿದೆ.
PublicNext
18/02/2021 11:41 am