ಚಂಗನೇ ಜಿಗಿದ ಚೀತಾ ಸೀದಾ ಬಂದು ಕಾರಿನ ರೂಫ್ ಮೇಲೆ ಕೂತಿದೆ. ಆ ವೇಳೆ ಕಾರಿನ ರೂಫ್ ತೆರೆದುಕೊಂಡೇ ಇತ್ತು. ಅಲ್ಲಿಂದಲೇ ಇಣುಕಿದ ಚೀತಾ, ಒಳಗಿದ್ದ ಎಲ್ಲರನ್ನೂ ಗಹನವಾಗಿ ನೋಡಿದೆ. ಇದೇ ವೇಳೆ ಕಾರಿನಲ್ಲಿದ್ದ ಒಬ್ಬ ಅದೆಂತಾ ಭಂಡ ಧೈರ್ಯ ಮಾಡಿದನೋ ಏನೋ ಸೀದಾ ಎದ್ದು ಚೀತಾ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾನೆ. ಈತನ ಸೆಪ್ಫಿಗೆ ಆ ಚೀತಾ ಕಣ್ಣಗಲಿಸಿ ಪೋಸ್ ಕೊಟ್ಟಿದೆ.
ಈ ದೃಶ್ಯ ಈಗ ಎಲ್ಲೆಡೆ ವೈರಲ್ ಆಗಿದೆ. ಇದು ಯಾವುದೋ ವನ್ಯಜೀವಿ ರಕ್ಷಿತಾರಣ್ಯ ಇರಬಹುದು. ಹಾಗಾಗಿಯೇ ದಿನಾಲೂ ಸಫಾರಿಗೆ ಬರುವ ಜನರೊಂದಿಗೆ ಚೀತಾ ಸಹಿಷ್ಣುವಾಗಿದೆ ಎಂದು ಕೆಲವರು ವಾದಿಸುತ್ತಿದ್ದಾರೆ. ಇನ್ನೂ ಕೆಲವರು ಈ ಸೆಲ್ಫಿ ತಕ್ಕೊಂಡಾತನಿಗೆ ರಿಸ್ಕ್ ತೆಗೊಳ್ಳೋದು ಅಂದ್ರೆ ಇಷ್ಟ ಇರಬಹುದು ಅದಕ್ಕೆ ಹೀಗೆ ಮಾಡಿದ್ದಾನೆ ಅಂತೆಲ್ಲ ಚರ್ಚೆಗಳು ನಡೆಯುತ್ತಿವೆ.
PublicNext
17/02/2021 08:10 pm