ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿರತೆಯ ಸ್ವಚ್ಛಂದ ವಿಹಾರ..! ಮೈ ಮರೆತು ನಿಂತ ಪ್ರವಾಸಿಗರಿಗೆ ತರಾಟೆ

ಕಾಡಿನ ಕ್ರೂರ ಮೃಗಗಳು ಕೆಲವೊಮ್ಮೆ ಜನರೊಂದಿಗೆ ಸ್ನೇಹದಿಂದ ವರ್ತಿಸುತ್ತವೆ. ಹಾಗಂತ ಕೊಂಚ ಮೈ ಮರೆತರೂ ಜೀವನನ್ನೇ ಕಳೆದುಕೊಳ್ಳಬೇಕಾಗುತ್ತದೆ. ಇದು ಗೊತ್ತಿದ್ದರೂ ಕೆಲವು ಕ್ರೂರ ಮೃಗಗಳ ಬಳಿಗೆ ಹೋಗುತ್ತಾರೆ. ಇಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚಿರತೆಯೊಂದಿಗೆ ಆಟಕ್ಕೆ ಇಳಿದ ಯುವಕರನ್ನು ನೆಟ್ಟಿಗರು ತರಾಟೆ ತೆಗೆದುಕೊಂಡಿದ್ದಾರೆ.

ಹಿಮಾಚಲ ಪ್ರದೇಶದ ಕುಲು ಜಿಲ್ಲೆಯ ತೀರ್ಥನ್ ಕಣಿವೆಯಲ್ಲಿ ಸೆರೆಯಾದ ದೃಶ್ಯ ಇದಾಗಿದ್ದು, ರಾಷ್ಟ್ರೀಯ ಉದ್ಯಾನವನದ ರಸ್ತೆಯಲ್ಲಿ ಚಿರತೆಯೊಂದು ಸ್ವಚ್ಛಂದವಾಗಿ ವಿಹರಿಸುತ್ತದೆ.

ಇದನ್ನು ಕಂಡ ಕೂಡಲೇ ಜನ ತಮ್ಮ ವಾಹನದಿಂದ ಕೆಳಗಿಳಿದು ಕುತೂಹಲದಿಂದ ನೋಡಿದ್ದಾರೆ. ಜೊತೆಗೆ ಅಲ್ಲೇ ಇದ್ದ ಊರಿನವರು ಕೂಡ ಯಾವುದೇ ಭಯವಿಲ್ಲದೆ ಚಿರತೆಯ ಪಕ್ಕ ಬಂದು ನಿಂತಿದ್ದರು.

ನೋಡ ನೋಡುತ್ತಿದ್ದಂತೆಯೇ ಜನರ ಸಂಖ್ಯೆ ಅಲ್ಲಿ ಹೆಚ್ಚಾಗಿತ್ತು. ಆದರೂ ಚಿರತೆ ಭಯಪಡಲಿಲ್ಲ. ಬದಲಾಗಿ, ಜನರ ಮಧ್ಯದಲ್ಲೇ ಓಡಾಡುತ್ತಿತ್ತು. ಪ್ರವಾಸಿಗರು ಕೂಡ ಚಿರತೆಯ ಪಕ್ಕದಲ್ಲೇ ನಿಂತು ಫೋಟೋ ತೆಗೆಯುತ್ತಿದ್ದರು.

ಒಂದು ಹಂತದಲ್ಲಿ ಚಿರತೆ ಅಲ್ಲೇ ಇದ್ದ ವ್ಯಕ್ತಿಯ ಮೊಣಕೈಯನ್ನು ಹಿಡಿದು ಎಳೆದಿದೆ. ಆದರೆ, ಅದೃಷ್ಟವಶಾತ್ ಈ ಕಾಡಿನ ಅತಿಥಿಯಿಂದ ಯಾರಿಗೂ ಗಾಯಗಳಾಗಿಲ್ಲ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Edited By : Manjunath H D
PublicNext

PublicNext

16/01/2021 05:29 pm

Cinque Terre

86.1 K

Cinque Terre

1

ಸಂಬಂಧಿತ ಸುದ್ದಿ