ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಕೊರೊನಾ ಬಿಕ್ಕಟ್ಟು- ನಿಸ್ವಾರ್ಥ ದಾನ' ಮತ್ತೆ ಮತ್ತೆ ನೆನಪಾಗುತ್ತೆ

ಹೆಮ್ಮಾರಿ ಕೊರೊನಾ ವೈರಸ್‌ ಮಾನವ ಕುಲವನ್ನೇ ತತ್ತರಿಸುವಂತೆ ಮಾಡಿದೆ. ಇದನ್ನು ತಡೆಯುವಲ್ಲಿ ಸರ್ಕಾರ ಜಾರಿಗೆ ತಂದ ಲಾಕ್‌ಡೌನ್ ಅದೆಷ್ಟೋ ಜನರ ಬದುಕನ್ನು ಬೀದಿಗೆ ತಂದಿದ್ದು ಅಷ್ಟೇ ಸತ್ಯ. ಇಂತಹ ಪರಿಸ್ಥಿತಿಯಲ್ಲಿ ಬಾಲಿವುಡ್‌ ನಟ ಸೋನು ಸೂದ್ ಅನೇಕ ಬಡ ಜನರ ಪಾಲಿಗೆ ದೇವರಾಗಿಬಿಟ್ಟರು. ಹಾಗೆ ಅದೆಷ್ಟೋ ಜನರು ಯಾವುದೇ ಫಲಾಪೇಕ್ಷೆ ಇಲ್ಲದೆ ಬಡ ಜನರ ನೆರವಿಗೆ ನಿಂತು ಸಾರ್ಥಕತೆ ಮೆರೆದರು.

ಇಂತಹದ್ದೇ ವಿಚಾರವಾಗಿ ವರಿಗಾರರೊಬ್ಬರು ಜನರ ಮನ ಗೆದ್ದಿದ್ದರು. ಈ ದೃಶ್ಯದ ತುಣುಕನ್ನು ಟ್ವೀಟ್ ಮಾಡಿರುವ ಉದ್ಯಮಿ ಹರ್ಷ ಗೋಯೆಂಕಾ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ವರ್ಷದ ನನ್ನ ನೆಚ್ಚಿನ ವರದಿಗಾರ ಇವರೇ ಎಂದು ಹೊಗಳಿದ್ದಾರೆ.

ಈ ವಿಡಿಯೋದಲ್ಲಿ ಬಿಬಿಸಿ ಪತ್ರಕರ್ತ ಸಲ್ಮಾನ್ ರವಿ ಅವರು ಪಂಜಾಬ್‌ನಿಂದ ಮಧ್ಯ ಪ್ರದೇಶಕ್ಕೆ ಕಾಲ್ನಡಿ ಮೂಲಕ ಹೊರಟಿದ್ದ ವಲಸೆ ಕಾರ್ಮಿಕರ ಗುಂಪನ್ನು ಸಂದರ್ಶಿಸುತ್ತಾರೆ. ಬರಿಗಾಲಿನಲ್ಲಿ ನಡೆಯುತ್ತಿರುವ ಅವರಲ್ಲಿ ಒಬ್ಬರೊಂದಿಗಿನ ಸಂವಾದದ ಸಮಯದಲ್ಲಿ ರವಿ ತಮ್ಮ ಶೂಗಳನ್ನು ತೆಗೆದು ಆ ವ್ಯಕ್ತಿಗೆ ನೀಡುತ್ತಾರೆ. ಅಷ್ಟೇ ಅಲ್ಲದೆ ಅವರ ಕಣ್ಣೀರಿನ ಕಥೆಯನ್ನು ಕೇಳಿ ಪೊಲೀಸ್‌ ಹಾಗೂ ಸ್ಥಳೀಯ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರ ಹಾಕುತ್ತಾರೆ. ಈ ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ದೃಶ್ಯವನ್ನು ಹರ್ಷ ಗೋಯೆಂಕಾ ಮತ್ತೊಮ್ಮೆ ನೆನಪಿಸಿದ್ದಾರೆ.

Edited By : Nagesh Gaonkar
PublicNext

PublicNext

10/01/2021 07:43 pm

Cinque Terre

113.24 K

Cinque Terre

4

ಸಂಬಂಧಿತ ಸುದ್ದಿ