ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬದಲಾಗದ ತಾಯಿ ವಾತ್ಸಲ್ಯ : ಮನುಷ್ಯರಾಗಲಿ,ಪ್ರಾಣಿಗಳಾಗಲಿ

ಪ್ರಪಂಚದಲ್ಲಿ ಯಾವ ಸಂಬಂಧಗಳನ್ನು ಯಾರು ಬೇಕಾದರೂ ತುಂಬಿ ಕೊಡಬಹುದು ಆದ್ರೆ ಮಾತಾ ಪಿತೃಗಳ ಸ್ಥಾನವನ್ನು ಯಾರಿಂದಲೂ ಭರಿಸಲು ಸಾಧ್ಯವಿಲ್ಲ. ವಿಶೇಷವಾಗಿ ತಾಯಿಯ ಸ್ಥಾನ.

ಅಮ್ಮನೆಂದರೆ ಅದೆಷ್ಟೋ ನೋವುಗಳು ಮಾಯವಾಗುತ್ತವೆ. ಅಂತಹದರಲ್ಲಿ ತಾಯಿ ಪ್ರೀತಿ ವಾತ್ಸಲ್ಯದ ಮುಂದೆ ಎಲ್ಲರೂ ನಶ್ವರ ಕಂದನಲ್ಲಿಯ ಕೊಂಚ ಬದಲಾವಣೆಯನ್ನು ಕ್ಷಣಾರ್ಧದಲ್ಲಿ ಗುರುತಿಸುವ ಏಕೈಕ ಜೀವ ಅಂದ್ರೆ ಅದು ಜನನಿ ಮಾತ್ರ.

ಅದು ಮನುಷ್ಯರಾಗಿರಬಹುದು ಇಲ್ಲವೇ ಪ್ರಾಣಿ ಪಕ್ಷಿಗಳಾಗಿರಬಹುದು..

ಸದ್ಯ ಇಲ್ಲೊಂದು ವಿಡಿಯೋದಲ್ಲಿ ಆಕಳೊಂದು ತನ್ನ ಕರುವಿಗಾಗಿ ಹಂಬಲಿಸಿದ ಪರಿ ನೋಡುಗರನ್ನು ಮೂಕವಿಸ್ಮಿತರಾಗಿಸಿದೆ.

ತಾಯಿ ವಾತ್ಸಲ್ಯ ಕೇವಲ ಮನುಷ್ಯರಲ್ಲಿ ಮಾತ್ರವಲ್ಲದೇ ಹಸುಗಳಲ್ಲೂ ಇದೆ ಅನ್ನೋದಕ್ಕೆ ಈ ವಿಡಿಯೋ ಹಸಿಸಾಕ್ಷಿ.

ಗಾಯಗೊಂಡಿದ್ದ ಕರುವೊಂದನ್ನ ರಿಕ್ಷಾದಲ್ಲಿ ಸಾಗಿಸಲಾಗುತ್ತಿತ್ತು. ಆ ವೇಳೆ ಕರುವನ್ನು ಹಿಂಬಾಲಿಸಿದ ತಾಯಿ ಹಸು ವಾಹನದ ಹಿಂದೆಯೇ ಓಡೋಡಿ ಬಂದಿದೆ.

ವಾಹನದ ವೇಗಕ್ಕೆ ಸರಿಯಾಗಿ ತಾಯಿ ಹಸು ಬರೋಬ್ಬರಿ ಮೂರು ಕಿಲೋಮೀಟರ್ ದೂರದವರೆಗೆ ಓಡಿದೆ. ಈ ದೃಶ್ಯ ಪ್ರತ್ಯಕ್ಷದರ್ಶಿಗಳ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Edited By :
PublicNext

PublicNext

01/01/2021 06:13 pm

Cinque Terre

162.69 K

Cinque Terre

5

ಸಂಬಂಧಿತ ಸುದ್ದಿ