ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರಡಿ ಗಸ್ತು...ಪೊಲೀಸರು ಬೇಸ್ತು!

ಕರಡಿ ಅಂದ್ರೆ ಯಾರಿಗೆ ತಾನೇ ಭಯ ಇಲ್ಲ ಹೇಳಿ... ಆದ್ರೆ, ಮೂರು ಕರಡಿಗಳು ತಡರಾತ್ರಿ ಪೊಲೀಸ್ ಠಾಣೆ ಆವರಣದಲ್ಲಿಯೇ ಅಚ್ಚರಿ ರೀತಿಯಲ್ಲಿ ಪರಿಶೀಲನೆ ನಡೆಸಿವೆ!

ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಅವರು ಈ ವಿಶೇಷ ವೀಡಿಯೊವನ್ನು ಟ್ವೀಟ್ ಮಾಡಿ, 'ತಡರಾತ್ರಿ ಪೊಲೀಸ್ ಠಾಣೆ ಆವರಣದಲ್ಲಿ ಅಚ್ಚರಿ, ರೋಮಾಂಚಕ ಪರಿಶೀಲನೆ.ಮೂರು ಕರಡಿಗಳು ಪೊಲೀಸ್ ಠಾಣೆ ಆವರಣಕ್ಕೆ ಪ್ರವೇಶಿಸಿದವು.

ಇಂತಹ ಸಂಕಷ್ಟಮಯ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದರೂ ಸಾರ್ವಜನಿಕರಿಗಾಗಿ ಸೇವೆ ಸಲ್ಲಿಸುತ್ತಿರುವ ನಮ್ಮ ಪೊಲೀಸರ, ಸೈನಿಕರ ಧೈರ್ಯ ಮತ್ತು ತಾಳ್ಮೆಗೆ ದೊಡ್ಡ ನಮಸ್ಕಾರ' ಎಂದು ಧನ್ಯವಾದ ತಿಳಿಸಿರುವ ಅವರು, 'ಸುರಕ್ಷತಾ ಕ್ರಮಗಳ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿ' ಎಂದು ಸಲಹೆ ನೀಡಿದ್ದಾರೆ.

ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

Edited By : Manjunath H D
PublicNext

PublicNext

30/12/2020 02:01 pm

Cinque Terre

117.41 K

Cinque Terre

3

ಸಂಬಂಧಿತ ಸುದ್ದಿ