ಮಾಡರ್ನ್ ಹುಡುಗೀರು ವಿಭಿನ್ನವಾಗಿ ಮದುವೆ ಆಗ್ತಿದ್ದಾರೆ. ಕೆಲವರು ಬುಲೆಟ್ ಬೈಕ್ ಏರಿ ಮದುವೆ ಮಂಟಪಕ್ಕೆ ಬಂದ್ರೆ ಇನ್ನೂ ಕೆಲವರು ಮೆರವಣಿಗೆ ಮೂಲಕ ಬರ್ತಾರೆ.
ಆದ್ರೆ ಇಲ್ನೋಡಿ. ಅವರೆಲ್ಲರಿಗಿಂತ ಮಾಡರ್ನ್ ಆದ ಈ ಹುಡುಗಿ ಸನ್ನಿ ಲಿಯೋನ್ ನಟಿಸಿದ ಚಿತ್ರದ ಹಾಡೊಂದಕ್ಕೆ ಸಖತ್ ಸ್ಟೆಪ್ ಹಾಕುತ್ತ ಮದುವೆ ಮಂಟಪದ ಕಡೆ ಬರುತ್ತಿದ್ದಾಳೆ.
ರಂಗ್ ಬಿರಂಗಿ ರೇಷ್ಮೆ ಸೀರೆ, ರೇಷ್ಮೆ ಶಾಲು, ಕರಿ ಚಷ್ಮಾ ಹಾಕಿದ ಈ ಹಾಲುಗಲ್ಲದ ಹುಡುಗಿ ಮದುವೆ ಹಂದರದಲ್ಲಿ ಸಖತ್ ಡ್ಯಾನ್ಸ್ ಮಾಡಿದ್ದಾಳೆ. ಈ ಮೂಲಕ ನೆರೆದಿದ್ದವರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾಳೆ.
ಈಕೆಯ ಕೈ ಹಿಡಿಯಲಿರುವ ಗಂಡ ವೇದಿಕೆ ಮೇಲೆ ತೆಪ್ಪಗೆ ನಿಂತು ತನ್ನ ಭಾವಿ ಪತ್ನಿಯ ಡ್ಯಾನ್ಸ್ ನೋಡುತ್ತ ಸುಮ್ಮನೇ ನಿಂತಿದ್ದಾನೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.
PublicNext
10/12/2020 01:48 pm