ನಮ್ಮ ನಮ್ಮೊಳಗೆ ದ್ವೇಷ -ಹಗೆತನಗಳು ಅದೆಷ್ಟರ ಮಟ್ಟಿಗೆ ಬೇರೂರಿವೆ ಅಂದ್ರೆ ಇದ್ದರೆ ನೀನಿರಬೇಕು ಇಲ್ಲ ನಾನಿರಬೇಕು ಎನ್ನುವಷ್ಟರ ಮಟ್ಟಿಗೆ. ಆ ರೀತಿ ಪರಸ್ಪರ ವೈರುಧ್ಯಗಳಲ್ಲೇ ಬದುಕುವವರು ಸ್ವಲ್ಪ ಇಲ್ನೋಡಿ..
ಈ ಸಹೋದರರು ಹುಟ್ಟುವಾಗಲೇ ಒಬ್ಬರೊನ್ನಬ್ಬರು ಮೈಗಂಟಿಕೊಂಡೇ ಬಿಟ್ಟಿರಲಾಗದ ಬಂಧುತ್ವವೆಂಬ ವರ ಪಡೆದು ಹುಟ್ಟಿದ್ದಾರೆ. ಹೀಗೆ ತಮ್ಮ ಸ್ಕೂಟಿ ಏರಿ ಪೆಟ್ರೋಲ್ ಬಂಕ್ ಗೆ ಬಂದ ಇವರು ಪೆಟ್ರೋಲ್ ಹಾಕಿಸಿಕೊಂಡು ತೆರಳುವ ಈ ವಿಡಿಯೋ ಈಗ ಎಲ್ಲ ಕಡೆ ವೈರಲ್ ಆಗಿದೆ. ಆ ಮೂಲಕ ಎಲ್ಲರಿಗೂ ಕೂಡಿ ಬಾಳುವ, ಹಂಚಿ ಉಣ್ಣುವ ಪಾಠ ಹೇಳಿಕೊಟ್ಟಿದೆ. ನನಗೆ ನೀನು, ನಿನಗೆ ನಾನು ಎಂಬಂತಿರುವ ಇವರು ನಿಮಗಾಗಿ ನಾವು ನಮಗಾಗಿ ನೀವು ಎಂಬ ಸಂದೇಶ ಕೊಟ್ಟಿದ್ದಾರೆ.
PublicNext
02/12/2020 06:38 pm