ಕರುಳ ಕುಡಿ ಕಾಪಾಡಿಕೊಳ್ಳಲು ಮೊಲ ಮಾಡಿದ ಹೋರಾಟ ನೋಡುಗರ ಎದೆ ಝಲ್ ಎನ್ನುವಂತಿದೆ.ಸರ್ಪದೊಂದಿಗೆ ಸೆಣಸಾಡಿ ತನ್ನ ಕಂದನನ್ನು ಕಾಪಾಡಿಕೊಳ್ಳುವ ಧಾವಂತದಲ್ಲಿ ನಾವು ನೀವೆಲ್ಲರೂ ಮುದ್ದು ಮಾಡುವ ಮೊಲ ವ್ಯಾಘ್ರವಾಗಿದೆ.
ಇದಕ್ಕೆ ಹೇಳುವುದು ಕರುಳ ಕುಡಿ ಸಂಬಂಧ ಬಹು ಗಟ್ಟಿ ಅಂತಾ ನೀವು ಈ ವಿಡಿಯೋದಲ್ಲಿ ನೋಡುತ್ತಿರಬಹುದು ಮೊಲ ತನ್ನ ಮರಿಯೊಂದಿಗೆ ಇರುವ ವೇಳೆ ಸರ್ಪ ಎಂಟ್ರಿ ಕೊಟ್ಟಿದೆ.
ತಾಯಿ ಮೊಲದ ಹೊರತಾಗಿ ಸರ್ಪ ಮರಿ ಮೇಲೆ ಕಣ್ಣು ಹಾಕುತ್ತಲೇ ತಾಯಿ ಮೊಲ ರಣಚಂಡಿಯಂತೆ ಮರಳಿ ಹೋಗುವ ಸರ್ಪವನ್ನು ಎಳೆದು ಎಳೆದು ತನ್ನ ಸಿಟ್ಟನ್ನಾ ಹೊರಹಾಕಿದೆ.
ಈ ಮೊಲದ ಸಹವಾಸವೇ ಸಾಕು ಎನ್ನುತ್ತಿರುವ ಸರ್ಪ ಮುಟ್ಟಿ ನೋಡಿಕೊಳ್ಳುವಂತೆ ಮೊಲ ಮಾಡಿದ ರೀತಿ ನಿಜಕ್ಕೂ ನೋಡುಗರಲ್ಲಿ ನಡುಕ ಹುಟ್ಟಿಸುವಂತಿದೆ.
PublicNext
29/11/2020 03:40 pm