ಹೂವಿನ ಹಡಗಲಿ: ಕ್ಷೇತ್ರದಲ್ಲಿ ಹತ್ತಾರು ಕಡೆಗೆ ಶಾಸಕ ಕೃಷ್ಣಾನಾಯ್ಕ್, ವಿಜಯನಗರ ಡಿಸಿ ಎಂಎಸ್ ದಿವಾಕರ್ ಸೈಕಲ್ ಸವಾರಿ ಮೂಲಕ ವಾರ್ಡ್‌ಗಳಿಗೆ ತೆರಳಿ ಜನರ ಸಮಸ್ಯೆ ಆಲಿಸಿದ್ದಾರೆ.
ಹಡಗಲಿ ಪಟ್ಟಣದ ಕೆಲವು ಪ್ರದೇಶಕ್ಕೆ ಭೇಟಿ ನೀಡಿ ಕುಡಿಯುವ ನೀರು, ರಸ್ತೆ, ಚರಂಡಿ, ಇತರೆ ಮೂಲಭೂತ ಸೌಕರ್ಯಗಳ ಬಗ್ಗೆ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಿದ್ರು. ತುಂಬಿ ನಿಂತಿರುವ ಚರಂಡಿಗಳ ಸ್ವಚ್ಚತೆಗೆ ತಕ್ಷಣ ಕ್ರಮಕ್ಕೆ ಡಿ.ಸಿ ಅಧಿಕಾರಿಗಳಿಗೆ ಸೂಚಿಸಿದ್ರು. ಕುಡಿಯುವ ನೀರನ್ನು ಪ್ರತಿ ಎರಡು ದಿನಕ್ಕೊಮ್ಮೆ ಅವಶ್ಯಕ್ಕೆ ತಕ್ಕಂತೆ ಸರಬರಾಜಿಗೆ ಸೂಚಿಸಿದ್ರು.
ಅಷ್ಟೇ ಅಲ್ಲದೇ ರಾಜ ಕಾಲುವೆಗಳ ದುರಸ್ಥಿ ಕಾರ್ಯ ಅವಶ್ಯವಿದ್ದು ಅಂದಾಜು ಪಟ್ಟಿ ತಯಾರಿಸಿ ಸಲ್ಲಿಸುವಂತೆ ಸೂಚಿಸಿದ್ರು. KSRTC ಬಸ್ ನಿಲ್ದಾಣ ಭೇಟಿ ನೀಡಿ ಶೌಚಾಲಯದ ನೀರು ನಿಲ್ದಾಣಕ್ಕೆ ನುಗ್ಗುತ್ತಿದ್ದು ವಾರದೊಳಗೆ ಶೌಚಾಲಯದಮ ನೀರನ್ನು UGDಗೆ ಸಂಪರ್ಕಿಸಲು ಸೂಚಿಸಿದ್ರು.
PublicNext
08/01/2025 02:15 pm