ವಿಜಯನಗರ : ಜಿಲ್ಲೆಯ ಹಡಗಲಿ ತಾಲೂಕಿನ ಇಟ್ಟಗಿ ಹೋಬಳಿಯ ಕೆಂಚಮ್ಮನಹಳ್ಳಿ ಗ್ರಾಮದ ಬಸವರಾಜ್ ಅನ್ನೋರ ಮನೆ ಕಳ್ಳತನ ಮಾಡಿದ್ದ ಆರೋಪಿಯಿನ್ನು ಪೊಲೀಸರು ಬಂಧಿಸಿದ್ದಾರೆ.
ವಿರೇಶ್ ಅನ್ನೋ ಖದೀಮ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮೂರು ಲಕ್ಷ ನಗದು, 2 ಲಕ್ಷ 91 ಸಾವಿರ ಬೆಲೆ ಬಾಳುವ 41 ಗ್ರಾಂ ಬಂಗಾರ, 36 ಸಾವಿರ ಬೆಲೆ ಬಾಳುವ ಬೆಳ್ಳಿ ಸೇರಿ 6 ಲಕ್ಷ 27 ಸಾವಿರ ಬೆಲೆ ಬಾಳುವ ಸ್ವತ್ತನ್ನ ಕಳ್ಳತನ ಮಾಡಿದ್ದ.
ಮನೆ ಕಳ್ಳತನ ಬಳಿಕ ಮಾಲೀಕ ಬಸವರಾಜ್ ಇಟ್ಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಸಿಲಿಸಿದ್ರು. ಬಳಿಕ ಖದೀಮನಿಗಾಗಿ ಬಲೆ ಬೀಸಿದ್ದ ಪೊಲೀಸರು ಕೇವಲ ಎರಡೇ ದಿನದಲ್ಲಿ ಕಳ್ಳನನ್ನ ಇಟ್ಟಗಿ ಹೋಬಳಿಯ ಪೊಲೀಸರು ಬಂಧಿಸಿದ್ದಾರೆ.
ಅರೆಸ್ಟ್ ಆದ ಆರೋಪಿ ವಿರೇಶ್ ಕಳ್ಳತನ ಮಾಡಿದ್ದ 6.27 ಲಕ್ಷ ಸ್ವತ್ತಿನ ಪೈಕಿ 5.76 ಲಕ್ಷ ಸ್ವತ್ತನ್ನ ಪೊಲೀಸರು ಜಪ್ತಿ ಮಾಡಿದ್ದಾರೆ. ಇನ್ನೂ ಬಂಧಿತ ಕಳ್ಳತನದ ಆರೋಪಿಯನ್ನ ಕಂಬಿಹಿಂದೆ ತಳ್ಳಲಾಗಿದ್ದು, ಇಟ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
19/01/2025 07:37 pm