ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ : ಪರೇಶ್ ಮೇಸ್ತಾ ಕೇಸ್ : ಬಿಜೆಪಿಗರು ಸಾರ್ವಜನಿಕ ಕ್ಷಮೆ ಯಾಚಿಸಲು ಮಾಜಿ ಶಾಸಕಿಯ ಆಗ್ರಹ

ಕಾರವಾರ (ಉತ್ತರಕನ್ನಡ): ಪರೇಶ್ ಮೇಸ್ತಾ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿರುವ ವರದಿಯಿಂದಾಗಿ ಕಾಂಗ್ರೆಸ್ ನಾಯಕರುಗಳು ದೋಷಮುಕ್ತರಾಗಿದ್ದಾರೆ. ಹಾಗೆಯೇ ಬಿಜೆಪಿ ನಾಯಕರುಗಳು ಜನರಲ್ಲಿ ಬಂದು ಕ್ಷಮೆ ಯಾಚನೆ ಮಾಡಬೇಕಿದೆ ಎಂದು ಕುಮಟಾ ಕ್ಷೇತ್ರದ ಮಾಜಿ ಶಾಸಕಿ ಶಾರದಾ ಶೆಟ್ಟಿ ಆಗ್ರಹಿಸಿದ್ದಾರೆ.

ಕುಮಟಾದಲ್ಲಿ ಮಾತನಾಡಿದ ಅವರು, 2017ರ ಡಿಸೆಂಬರ್ 6ರಂದು ಹೊನ್ನಾವರದಲ್ಲಿ ನಡೆದಿದ್ದ ಪರೇಶ್ ಮೇಸ್ತಾನ ಸಾವಿಗೆ ಬಿಜೆಪಿಯವರು ಬಣ್ಣ ಹಚ್ಚಿದರು. ಕಾಂಗ್ರೆಸ್ ನವರು ಮಾಡಿಸಿದ್ದು, ಮುಸ್ಲಿಮರು ಮಾಡಿದ್ದೆಂದು ಅಪಪ್ರಚಾರ ಮಾಡಿದರು. ಇದರಿಂದಾಗಿ ಪರಿಸ್ಥಿತಿ ಬಿಗಡಾಯಿಸಿತು. ಅದನ್ನೆಲ್ಲ ನೋಡಿಕೊಂಡೂ ಸಹ ಬಿಜೆಪಿಯವರು ಕಣ್ಣಿದ್ದೂ ಕುರುಡರಂತೆ ಅಂದು ವರ್ತಿಸಿದ್ದರು ಎಂದಿದ್ದಾರೆ.

ಅಂದಿನ ಕಾಂಗ್ರೆಸ್ ಸರ್ಕಾರ ಈ ಪ್ರಕರಣವನ್ನ ಸಿಒಡಿ ತನಿಖೆಗೆ ನೀಡಲು ಮುಂದಾದರೂ ಸಿಬಿಐ ತನಿಖೆಗೆ ನೀಡಬೇಕೆಂದು ಬಿಜೆಪಿಗರು ಆಗ್ರಹಿಸಿದ್ದರು. ಪ್ರಕರಣ ಸಿಬಿಐಗೆ ನೀಡಿ ಈ ಡಿಸೆಂಬರ್ ಬಂದರೆ ಆರು ವರ್ಷ ಪೂರ್ಣಗೊಳ್ಳಲಿದೆ. ಇಷ್ಟು ದೀರ್ಘ ಕಾಲ ಪ್ರಕರಣದ ತನಿಖೆ ನಡೆಯಲು ಕೂಡ ರಾಜಕೀಯದ ಒತ್ತಡವೇನಾದರೂ ಇತ್ತಾ ಎನ್ನುವುದು ಕೂಡ ಸಂಶಯ ಬರುತ್ತದೆ ಎಂದಿದ್ದಾರೆ.

ಬಿಜೆಪಿಗರು ಢೋಂಗಿ ರಾಜಕೀಯ ಮಾಡುತ್ತಿದ್ದಾರೆ. ಪರೇಶ್ ಮೇಸ್ತಾನ ಪ್ರಕರಣದ ವರದಿಯ ಬಗ್ಗೆ ಜನರು ಕೂಡ ವಿಚಾರ ಮಾಡಬೇಕು. ಈ ಪ್ರಕರಣದಲ್ಲಿ ಬಿಜೆಪಿ ನಾಯಕರುಗಳಾದ ಅನಂತಕುಮಾರ ಹೆಗಡೆ ಪ್ರಥಮ ಆರೋಪಿ, ಶೋಭಾ ಕರಂದ್ಲಾಜೆ ಎರಡನೇಯವರು ಮತ್ತು ನಾಗರಾಜ ನಾಯಕ ಮೂರು ಹಾಗೂ ಲಾಭ ಪಡೆದ ಇನ್ನಿತರ ಬಿಜೆಪಿ ಶಾಸಕರುಗಳನ್ನು ನಂತರದ ಆರೋಪಿಗಳನ್ನಾಗಿ ಮಾಡಬೇಕು ಎಂದಿದ್ದಾರೆ.

Edited By : Shivu K
PublicNext

PublicNext

04/10/2022 01:35 pm

Cinque Terre

16.76 K

Cinque Terre

0

ಸಂಬಂಧಿತ ಸುದ್ದಿ