ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ : ಒಂದೇ ದಿನದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಲ್ಲ, ಆದ್ರೆ ನಿಶ್ಚಯವಾಗಿ ಮಾಡ್ತೇವೆ : ಸಚಿವ ಪೂಜಾರಿ

ಕಾರವಾರ (ಉತ್ತರಕನ್ನಡ): ಒಂದೇ ದಿನದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆಗಲ್ಲ. ಆದರೆ ನಿಶ್ಚಯವಾಗಿ ಉತ್ತರಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಾಡುವುದು ಸರ್ಕಾರದ ಬದ್ಧತೆ ಎಂದು ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕಾರವಾರದಲ್ಲಿ ಮಾತನಾಡಿದ ಅವರು, ಆಸ್ಪತ್ರೆಯೂ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಗೆ ಮುಖ್ಯಮಂತ್ರಿಗಳು ಜಿಲ್ಲೆಗೆ ಬರಲಿದ್ದಾರೆ. ಈ ಬಗ್ಗೆ ಜಿಲ್ಲೆಯ ಎಲ್ಲಾ ಶಾಸಕರುಗಳು ಭೇಟಿಯಾಗಿ ಅವರೊಂದಿಗೆ ಮಾತನಾಡಿದ್ದೇವೆ. ಸದನ ಮುಗಿಯುತ್ತಿದ್ದಂತೆ ಅವರು ಜಿಲ್ಲೆಗೆ ಬರುಗ ಬಗ್ಗೆ ಭರವಸೆ ನೀಡಿದ್ದಾರೆ ಎಂದರು.

ಅನೇಕ ಸಾರಿ ಆರ್ಥಿಕ ಇಲಾಖೆಗಳು ಪ್ರಸ್ತಾವನೆಯನ್ನ ಒಪ್ಪಲ್ಲ. ಆದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವಿಚಾರವಾಗಿ ಆರ್ಥಿಕ ಇಲಾಖೆಯನ್ನ ಒಪ್ಪಿಸುವವರೆಗೂ ಪ್ರಸ್ತಾವ ಕಳುಹಿಸುತ್ತೇವೆ. ಮುಖ್ಯಮಂತ್ರಿಗಳನ್ನ ಕಾಡುತ್ತೇವೆ ಎಂದಿದ್ದಾರೆ.

Edited By :
PublicNext

PublicNext

17/09/2022 12:07 pm

Cinque Terre

24.95 K

Cinque Terre

2

ಸಂಬಂಧಿತ ಸುದ್ದಿ