ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ ಸೂಪರ್ ಸ್ಪೆಷಾಲಿಟಿಗಾಗಿ 24 ಮನವಿ, ನಾಲ್ಕು ಬಾರಿ ತಿರಸ್ಕಾರ: ನೋವಿನಿಂದ ನುಡಿದ ಶಾಸಕಿ

ಕಾರವಾರ (ಉತ್ತರಕನ್ನಡ): ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಗಾಗಿ ಈವರೆಗೆ 24 ಬಾರಿ ಮನವಿ ಸಲ್ಲಿಸಿದ್ದೇವೆ. ಆರ್ಥಿಕ ಇಲಾಖೆಗೆ ಸಲ್ಲಿಕೆಯಾದ ಪ್ರಸ್ತಾವ ನಾಲ್ಕು ಬಾರಿ ತಿರಸ್ಕೃತಗೊಂಡಿರುವುದು ನಿಜಕ್ಕೂ ಬೇಸರ ತಂದಿದೆ ಎಂದು ಕಾರವಾರ ಶಾಸಕಿ ರೂಪಾಲಿ ನಾಯ್ಕ ಹೇಳಿದರು.

ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ಮಾಡಿದಾಗ ಆರೋಗ್ಯ ಸಚಿವರು ಇರಲಿಲ್ಲ. ಆದರೆ ತದನಂತರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರನ್ನು ಬಹಳ ನೋವಿನಿಂದಲೇ ಭೇಟಿಯಾಗಿದ್ದೇವೆ. ಅವರು ಕೂಡ ಜಿಲ್ಲೆಗೆ ಭೇಟಿ ನೀಡಿ, ಆಸ್ಪತ್ರೆಯ ಬಗ್ಗೆ ಘೋಷಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಕಾರವಾರದಲ್ಲಿ 160 ಕೋಟಿಯಲ್ಲಿ ಈಗಾಗಲೇ ಕಟ್ಟಡ ನಿರ್ಮಾಣವಾಗುತ್ತಿದೆ. ಹೆಚ್ಚುವರಿ ಅನುದಾನಕ್ಕಾಗಿ ಈ ಹಿಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಈ ಬಗ್ಗೆ ಮನವಿ ಮಾಡಲಾಗಿತ್ತು. ಅವರು ಅಂದು 30 ಕೋಟಿ ಬಿಡುಗಡೆ ಮಾಡಿದ್ದನ್ನ ಆರ್ಥಿಕ ಇಲಾಖೆ ತಿರಸ್ಕಾರಗೊಳಿಸಿರುವುದು ಬಹಳ ನೋವು ತಂದಿದೆ ಎಂದರು.

Edited By :
PublicNext

PublicNext

17/09/2022 12:51 pm

Cinque Terre

27.42 K

Cinque Terre

0

ಸಂಬಂಧಿತ ಸುದ್ದಿ