ಕಾರವಾರ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಹೊನ್ನಾವರ ತಾಲೂಕಿನ ಮಾವಿನಕುರ್ವಾ ಗ್ರಾಮದಲ್ಲಿ ಸೋಮವಾರ ಗುಡ್ಡ ಕುಸಿತವಾಗಿದೆ.ಗ್ರಾಮದ ರಸ್ತೆಯ ಮೇಲೆ ಗುಡ್ಡ ಕುಸಿದಿದ್ದು, ಹೆಚ್ಚು ಜನರು ಓಡಾಟ ಮಾಡದ ರಸ್ತೆಯಾಗಿದ್ದರಿಂದ ಅನಾಹುತ ತಪ್ಪಿದೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಾಲೂಕಾಡಳಿತ ಅಧಿಕಾರಿಗಳು ಆಗಮಿಸಿ ಮಣ್ಣನ್ನ ತೆರವು ಮಾಡಿ ವಾಹನ ಓಡಾಡಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಗುಡ್ಡ ಕುಸಿತವಾದ ಸ್ಥಳದಲ್ಲೇ ಮತ್ತೆ ಮಳೆ ಹೆಚ್ಚಾದರೆ ಮತ್ತಷ್ಟು ಆತಂಕ ಹೆಚ್ಚಾಗಲಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ.
PublicNext
12/09/2022 09:24 pm