ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಸರ್ಕಾರಿ ಸಾರಿಗೆ ಬಸ್‌ಗಳ ಮೇಲೆ ತಂಬಾಕು ಉತ್ಪನ್ನಗಳ ಜಾಹೀರಾತು; ತೆರವಿಗೆ ಕರವೇ ಒತ್ತಾಯ

ಸರ್ಕಾರಿ ಸಾರಿಗೆ ಬಸ್‌ಗಳ ಮೇಲೆ ಪ್ರಚಾರ ಮಾಡುತ್ತಿರುವ ತಂಬಾಕು ಉತ್ಪನ್ನಗಳ ಜಾಹೀರಾತು ತೆರವುಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.

ಸಾರಿಗೆ ಬಸ್‌ಗಳಲ್ಲಿ ಶಾಲಾ- ಕಾಲೇಜು ಮಕ್ಕಳು ಓಡಾಡುತ್ತಾರೆ. ಆದರೆ ಸರ್ಕಾರ ಸಾರಿಗೆ ಬಸ್‌ಗಳ ಮೇಲೆ ಕೆಲ ತಂಬಾಕು ಕಂಪನಿಗಳ ಜಾಹೀರಾತುಗಳನ್ನ ಪ್ರಚಾರಪಡಿಸುತ್ತಿದೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಕರವೇ ಹೊನ್ನಾವರ ತಾಲೂಕಾಧ್ಯಕ್ಷ ಮಂಜುನಾಥ ಗೌಡ ತಿಳಿಸಿದ್ದಾರೆ.

ಹಣ ಕೊಡುತ್ತಾರೆಂದರೆ ಓಸಿ, ಇಸ್ಪೀಟು ಎಲ್ಲದರ ಜಾಹೀರಾತುಗಳನ್ನೂ ಇವರು ಹಾಕುತ್ತಾರೆಂದಾಯಿತು. ತಕ್ಷಣವೇ ಈ ಜಾಹೀರಾತುಗಳನ್ನ ತೆರವುಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಾವೇ ವಿದ್ಯಾರ್ಥಿಗಳೊಂದಿಗೆ ಸೇರಿಕೊಂಡು ತೆರವು ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

Edited By :
PublicNext

PublicNext

16/09/2022 03:54 pm

Cinque Terre

29.01 K

Cinque Terre

1

ಸಂಬಂಧಿತ ಸುದ್ದಿ