ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ರೈಲ್ವೆ ನಿಲ್ದಾಣದಲ್ಲಿ ಗಾಂಜಾ ಮಾರಾಟ ಯತ್ನ; ಈರ್ವರು ಪೊಲೀಸರ ವಶಕ್ಕೆ

ಕಾರವಾರ (ಉತ್ತರಕನ್ನಡ): ರೈಲ್ವೇ ನಿಲ್ದಾಣದ ಸಮೀಪ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಇಬ್ಬರು ಆರೋಪಿತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹೊನ್ನಾವರದ ಕರ್ಕಿ ರೈಲ್ವೇ ನಿಲ್ದಾಣದ ಸಮೀಪ ಹೊನ್ನಾವರದ ನಾಗರಾಜ ಆಚಾರ್ಯ, ಕಾಸರಕೋಡದ ಸಮೀರ್ ಶೇಖ್ ಎನ್ನುವವರು 15 ಸಾವಿರ ಮೌಲ್ಯದ 530 ಗ್ರಾಂ ಗಾಂಜಾ ಇಟ್ಟುಕೊಂಡು, ಅದನ್ನು ಮಾರಾಟಕ್ಕೆ ಯತ್ನಿಸುತ್ತಿದ್ದರು.

ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಮಾಲು ಸಹಿತ ಆರೋಪಿತರನ್ನು ವಶಕ್ಕೆ ಪಡೆದಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Edited By : Nagaraj Tulugeri
PublicNext

PublicNext

19/09/2022 12:18 pm

Cinque Terre

11.42 K

Cinque Terre

0

ಸಂಬಂಧಿತ ಸುದ್ದಿ