ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹುಕ್ಕಳಿ ಗ್ರಾಮದ ಹುಂಡಿಗದ್ದೆ ಜಲಪಾತ ವೀಕ್ಷಣೆಗೆ ಬಂದಿದ್ದ ವೇಳೆ ಕಾಲು ಜಾರಿ ಬಿದ್ದು ಯುವಕನೋರ್ವ ಕಣ್ಮರೆಯಾಗಿದ್ದಾನೆ.
ಮೈಸೂರು, ಬೆಂಗಳೂರು, ಕೋಲಾರ ಮೂಲದ ಒಟ್ಟು 13 ಪ್ರವಾಸಿಗರು ಹಾರ್ಸಿಕಟ್ಟಾದ ವಿನಾಯಕ ಹೆಗಡೆ ಅವರೊಂದಿಗೆ ಹುಂಡಿಗದ್ದೆ ಜಲಪಾತ ವೀಕ್ಷಣೆಗೆ ಬಂದಿದ್ದರು. ಈ ವೇಳೆ ಕೋಲಾರ ಜಿಲ್ಲೆಯ ಮುದುವತ್ತಿ ಗ್ರಾಮದ ರಾಘವೇಂದ್ರ ಗೌಡ ಕಾಲು ಜಾರಿ ಜಲಪಾತಕ್ಕೆ ಬಿದ್ದು ನಾಪತ್ತೆಯಾಗಿದ್ದಾನೆ. ಏರ್ಟೆಲ್ ಕಂಪನಿಯಲ್ಲಿ ಈತ ಕೆಲಸ ಮಾಡುತ್ತಿದ್ದ. ನಾಪತ್ತೆತಾದವನ ಪತ್ತೆ ಕಾರ್ಯ ಮುಂದುವರೆದಿದ್ದು, ಕುಮಟಾ ಪೊಲೀಸ್ ಠಾಣೆಗೆ ಕೂಡ ಮಾಹಿತಿ ನೀಡಲಾಗಿದೆ.
PublicNext
11/09/2022 02:42 pm