ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಪಿಕಪ್ ವಾಹನ ಡಿಕ್ಕಿಯಾಗಿ ಯುವಕ ಸ್ಥಳದಲ್ಲೇ ಸಾವು

ಕಾರವಾರ (ಉತ್ತರಕನ್ನಡ): ಪಿಕಪ್ ವಾಹನ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಿದ್ದಾಪುರ ತಾಲೂಕಿನ ಕಾಳೇನಳ್ಳಿ ಸಮೀಪ ಸಂಭವಿಸಿದೆ.

ಕಾಳೇನಳ್ಳಿ ಸಮೀಪದ ದೊಡ್ಡಜಡ್ಡಿಯ ಯುವಕ ಹರೀಶ ನಾಯ್ಕ (24) ಮೃತ ದುರ್ದೈವಿ. ಶಿರಸಿ- ಸಿದ್ದಾಪುರ ಮುಖ್ಯ ರಸ್ತೆಯಲ್ಲಿ ಯುವಕನು ಸ್ಕೂಟಿಯಲ್ಲಿ ಶಿರಸಿ ಕಡೆಗೆ ಹೋಗುತ್ತಿರುವಾಗ ಸಿದ್ದಾಪುರ ಕಡೆಗೆ ಬರುತ್ತಿದ್ದ ಪಿಕಪ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. ಸ್ಥಳಕ್ಕೆ ಸಿದ್ದಾಪುರ ಪಿ.ಎಸ್.ಐ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

26/09/2022 10:47 pm

Cinque Terre

7.72 K

Cinque Terre

0

ಸಂಬಂಧಿತ ಸುದ್ದಿ