ಬೈಂದೂರು: ವ್ಯವಸಾಯ ಸೇವಾ ಸಹಕಾರಿ ಸಂಘದ ಕರಾವಳಿ ಶಾಖೆಯ ಬೀಗ ಮುರಿದು ಕಳವುಗೈದಿರುವ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜು.21ರ ಗುರುವಾರ ನಡೆದಿದೆ.
ಪಕ್ಕದ ಶಾಖೆಯ ಹೊರಗಿನ ಗೇಟ್ ಮತ್ತು ಶಟರ್ ನ ಒಳಭಾಗವನ್ನು ಮುರಿದು ನುಗ್ಗಿದ ಕಳ್ಳರು ಹಣಕ್ಕಾಗಿ ಕೌಂಟರ್ ಮುಂತಾದ ಕಡೆ ಹುಡುಕಿದ್ದಾರೆ. ಕಳ್ಳತನವಾದ ಮೌಲ್ಯದ ನಿಖರ ಮಾಹಿತಿ ದೊರೆತಿಲ್ಲ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
Kshetra Samachara
22/07/2022 10:38 pm