ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: 2,94,765/- ಮೊತ್ತದ ಪ್ರಾಕೃತಿಕ ವಿಕೋಪದ ಪರಿಹಾರ ಧನ ಚೆಕ್ ವಿತರಣೆ

ಉಡುಪಿ: ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಉಡುಪಿ ತಾಲೂಕಿನ 11 ಕುಟುಂಬಗಳಿಗೆ ಇಂದು ಉಡುಪಿ ಶಾಸಕರ ಕಚೇರಿಯಲ್ಲಿ ಪರಿಹಾರ ಧನದ ಚೆಕ್ ನ್ನು ಶಾಸಕ ಕೆ. ರಘುಪತಿ ಭಟ್ ವಿತರಿಸಿದರು.

ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಉಡುಪಿ ತಾಲೂಕಿನ ಹೆರ್ಗ ಗ್ರಾಮದ ಬೂದ ಶೆಟ್ಟಿಗಾರ್ ಅವರಿಗೆ ರೂ. 50,615/-, ಸುಮತಿ ನಾಯ್ಕ್ ಅವರಿಗೆ ರೂ. 49,660/-, ಕಡೆಕಾರು ಗ್ರಾಮದ ವಸಂತ ಪೂಜಾರಿ ಅವರಿಗೆ ರೂ. 30,560/-, ದಾಮೋದರ ಕೋಟ್ಯಾನ್ 43,930/- ಕೊಡವೂರು ಗ್ರಾಮದ ಸುಜಾತಾ ಅವರಿಗೆ ರೂ. 10,000/-, ಬೇಬಿ ಪೂಜಾರಿ ಅವರಿಗೆ ರೂ. 20 000/-, ಮಾಲತಿ ಅವರಿಗೆ ರೂ. 20,000/-, ವೇದಾವತಿ ಕಾಂಚನ ಅವರಿಗೆ ರೂ. 15,000/-, ಸುರೇಖಾ ಅವರಿಗೆ ರೂ. 20,000/-, ಮಲ್ಲಿಕಾ ದೇವಿ ಅವರಿಗೆ ರೂ. 20,000/-, ನಳಿನಿ ಅವರಿಗೆ ರೂ. 15,000/- ಸೇರಿದಂತೆ ಒಟ್ಟು ರೂ.2,94,765 ಮೊತ್ತದ ಚೆಕ್ ಶಾಸಕ ಶ್ರೀ ಕೆ. ರಘುಪತಿ ಭಟ್ ರವರ ಶಿಫಾರಸಿನ ಮೇರೆಗೆ ಮಂಜೂರಾಗಿರುತ್ತದೆ.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಶ್ರೀಶ ಕೊಡವೂರು, ಕಡೆಕಾರ್ ಗ್ರಾಮ ಪಂಚಾಯತ್ ಸದಸ್ಯರಾದ ರಾಘವೇಂದ್ರ ಕುತ್ಪಾಡಿ ಹಾಗೂ ಉಡುಪಿ ತಹಶೀಲ್ದಾರರಾದ ಪ್ರದೀಪ್ ಕುರ್ಡೆಕರ್, ಗ್ರಾಮ ಲೆಕ್ಕಾಧಿಕಾರಿಗಳಾದ ವಾಸುದೇವ್, ಕಾರ್ತಿಕೇಯ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

04/08/2021 01:50 pm

Cinque Terre

5.28 K

Cinque Terre

0

ಸಂಬಂಧಿತ ಸುದ್ದಿ