ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಪ್ಪಿನಂಗಡಿ: ಸೈಬರ್ ಕೈಂ-ಫೋನ್ ಕರೆ ಸ್ವೀಕರಿಸಿದಾಗಲೇ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ

ಉಪ್ಪಿನಂಗಡಿ: ವ್ಯಕ್ತಿಯೋರ್ವರು ದೂರವಾಣಿ ಕರೆ ಸ್ವೀಕರಿಸಿದ ಕೂಡಲೇ ಅವರ ಖಾತೆಯಲ್ಲಿದ್ದ ಹಣ ವರ್ಗಾವಣೆಗೊಂಡ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಇಲ್ಲಿನ ಮಾಧ್ಯಮ ಪ್ರತಿನಿಧಿಯೊಬ್ಬರಿಗೆ ಗುರುವಾರ ಬೆಳಗ್ಗೆ ಪೋನ್ ಕರೆಯೊಂದು ಬಂದಿದ್ದು, ಕರೆಯನ್ನು ಸ್ವೀಕರಿಸಿದಾಗ ಯಾವುದೇ ಮಾತುಕತೆ ಮಾಡದೆ ಪೋನ್ ಕರೆ ಕಡಿತಗೊಂಡಿತ್ತು. ಬಳಿಕ ಅವರು ಟ್ರೂ ಕಾಲರ್ ಮೂಲಕ ಕರೆಯ ಮೂಲವನ್ನು ಶೋಧಿಸಿದಾಗ ಅಲ್ಲಿ 'ಲೈಕ್‌ಲೀ ಪ್ರಾಡ್' ಎಂಬುದು ಕಂಡು ಬಂದಿದೆ.

ತಕ್ಷಣವೇ ಈ ಬಗ್ಗೆ ಸಂಶಯಪಟ್ಟ ಅವರು ತನ್ನ ಫೋನ್‌ ಸಂದೇಶ ಪರಿಶೀಲಿಸಿದಾಗ ಆ ಫೋನ್ ನಂಬರ್ ಲಿಂಕ್ ಆಗಿದ್ದ ಐಪಿಪಿಬಿ ಖಾತೆಯಿಂದ 161 ರೂ ಹಾಗೂ 14,839 ರೂ. ಅಟೊ ಪೇ ಆಗಿದೆ ಎಂಬ ಸಂದೇಶ ಬಂದಿದೆ ಕಳವಳಕ್ಕೀಡಾದ ಅವರು, ಐಪಿಪಿಬಿ ಖಾತೆಯ ಬಗ್ಗೆ ಇಲಾಖಾಧಿಕಾರಿಗಳಲ್ಲಿ ದೂರು ಸಲ್ಲಿಸಿದಾಗ ಸದ್ರಿ ಅಟೋ ಪೇ ಯಲ್ಲಿ 161 ರೂ. ವರ್ಗಾವಣೆ ಗೊಂಡಿದ್ದು, 14839 ರೂ. ಸಮರ್ಪಕ ಬ್ಯಾಲೆನ್ಸ್ ಇಲ್ಲದ ಕಾರಣಕ್ಕೆ ತಡೆಹಿಡಿಯಲ್ಪಟ್ಟಿದೆ ಎಂಬ ಮಾಹಿತಿ ದೊರಕಿದೆ.

ಇದೇ ವೇಳೆ ಅದೇ ಸಂಖ್ಯೆಯಿಂದ ಮತ್ತೊಂದು ಕರೆ ಅವರಿಗೆ ಬಂದಿದ್ದು, ಆ ವೇಳೆಗೆ ಜಾಗೃತಗೊಂಡಿದ್ದ ಪರಿಣಾಮ ಅವರು ಕರೆಯನ್ನು ಸ್ವೀಕರಿಸಲಿಲ್ಲ. ಹಣ ಲಪಟಾಯಿಸಲು ಬಳಸಿದ ಪೋನ್ ನಂಬರ್ 68778220051 ಎಂದಾಗಿತ್ತು.

ಪೋನ್ ಕರೆಯನ್ನು ಸ್ವೀಕರಿಸಿದ ಕೂಡಲೇ ಖಾತೆಯಲ್ಲಿದ್ದ ಹಣವು ಆಟೊ ಪೇ ಗೆ ಒಳಗಾಗಿ ರುವುದು ಆಶ್ಚರ್ಯ ಮೂಡಿಸಿದ್ದು, ಇದು ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಪೋನ್ ನಂಬರ್‌ಗಳನ್ನು ಬಳಸಿಕೊಂಡು ಖಾತೆಯಲ್ಲಿದ್ದ ಹಣವನ್ನು ವಂಚಿಸಲು ವಂಚಕರಿಗೆ ಸುಲಭ ಸಾಧ್ಯವಾಗುವ ಮೂಲಕ ನಾಗರಿಕ ಸಮಾಜವನ್ನು ಕಳವಳಕ್ಕೀಡು ಮಾಡಿದೆ.

ಪೋನ್ ಕರೆಯನ್ನು ಸ್ವೀಕರಿಸಿದ ಮಾತ್ರಕ್ಕೆ ಖಾತೆಯಲ್ಲಿರುವ ಹಣವು ಕ್ಷಣಾರ್ಧದಲ್ಲಿ ವರ್ಗಾವಣೆ ಗೊಳ್ಳುವುದು ವ್ಯವಸ್ಥೆಯಲ್ಲಿನ ಪ್ರಧಾನ ಲೋಪ ವಾಗಿದ್ದು, ಪರಿಶೀಲನಾ ಸಮಯಾವಕಾಶದಂತಹ ರಕ್ಷಣಾತ್ಮಕ ವ್ಯವಸ್ಥೆಗಳನ್ನು ಆರ್ಥಿಕ ವ್ಯವಹಾರದ ಸಂಸ್ಥೆಗಳು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.ಪ್ರಕರಣದ ಬಗ್ಗೆ ಅವರು ಸೈಬರ್ ಕ್ರೈಂ ವಿಭಾಗದ ಪೊಲೀಸರಿಗೆ ದೂರು ನೀಡಿದ್ದಾರೆ.

Edited By : PublicNext Desk
Kshetra Samachara

Kshetra Samachara

13/12/2024 12:14 pm

Cinque Terre

356

Cinque Terre

0

ಸಂಬಂಧಿತ ಸುದ್ದಿ