ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಶೇ.76.21 ಮತದಾನ; 3 ಕಿ.ಮೀ. ದೂರದಿಂದ ವೀಲ್ ಚೇರ್ ನಲ್ಲಿಯೇ ಬಂದು ಮತ ಚಲಾಯಿಸಿದ ವಿಶೇಷ ಚೇತನ!

ಕಾರ್ಕಳ: ಗ್ರಾಮ ಪಂಚಾಯಿತಿಗಳಿಗೆ ಭಾನುವಾರ ನಡೆದ ದ್ವಿತೀಯ ಹಾಗೂ ಅಂತಿಮ ಹಂತದ ಮತದಾನದಲ್ಲಿ ಕಾರ್ಕಳ ತಾಲೂಕಿನಲ್ಲಿ ಶೇ. 76.21 ಮತದಾನವಾಗಿದ್ದು, ಬಹುತೇಕ ಎಲ್ಲೆಡೆ ಮತದಾನ ಶಾಂತಿಯುತವಾಗಿ ನಡೆಯಿತು.

ನಕ್ಸಲ್‌ಪೀಡಿತ ಪ್ರದೇಶವಾಗಿರುವ ಅಂಡಾರು, ಶಿರ್ಲಾಲು,ಕೆರ್ವಾಶೆ, ಈದು,ನೂರಾಳ್‌ಬೆಟ್ಟು,ಮಾಳ ಗ್ರಾಮಗಳ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಪೊಲೀಸ್ ಪಡೆ ನಿಯೋಜಿಸಲಾಗಿತ್ತು. ಭಾನುವಾರ ರಜಾ ದಿನವಾಗಿದ್ದರಿಂದ ಬೆಳಗಿನ ಹೊತ್ತು ಮತದಾನದಲ್ಲಿ ಬಿರುಸು ಕಂಡುಬಂದಿದ್ದರೂ ಬಳಿಕ ನಿಧಾನಗತಿಯಲ್ಲಿ ಸಾಗಿತ್ತು. ಒಟ್ಟಾರೆ 1,28, 357 ಮತದಾರರಲ್ಲಿ 97, 825 ಮತ ಚಲಾವಣೆಯಾಗಿವೆ.

ಈ ಪೈಕಿ 46, 205 ಪುರುಷರು ಹಾಗೂ 51, 620 ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತ ಚಲಾವಣೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಮುಂದಿರುವುದು ಗಮನಾರ್ಹ.

ಇಂದು ನಡೆದ ಪಂಚಾಯಿತಿ ಚುನಾವಣೆಯಲ್ಲಿ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಸುರೇಶ್ ಸೆರ್ವೇಗಾರ್ ಎಂಬ 54ರ ಹರೆಯದ ವಿಶೇಷಚೇತನ ವ್ಯಕ್ತಿ ತನ್ನ ವೀಲ್‌ಚೇರ್‌ನಲ್ಲಿ 3 ಕಿ.ಮೀ. ದೂರದಿಂದ ಬಂದು ದೇಂದಬೆಟ್ಟು ಮತಗಟ್ಟೆಯಲ್ಲಿ ಮತದಾನ ಮಾಡಿರುವುದು ವಿಶೇಷವಾಗಿತ್ತು. ಸಾಮಾನ್ಯವಾಗಿ ಯುವಕರೇ ಹೆಚ್ಚಾಗಿ ಮತದಾನದ ಬಗ್ಗೆ ಆಸಕ್ತಿ ವಹಿಸದೇ ನಿರ್ಲಕ್ಷ್ಯ ತೋರುವ ನಡುವೆಯೂ ಈ ವ್ಯಕ್ತಿ ಮಾದರಿ ಎನಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

27/12/2020 10:35 pm

Cinque Terre

11.91 K

Cinque Terre

1

ಸಂಬಂಧಿತ ಸುದ್ದಿ