ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯತ್ 20 ವರ್ಷಗಳ ಬಳಿಕ ಕಾಂಗ್ರೆಸ್ ತೆಕ್ಕೆಗೆ

ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯತ್ ಚುನಾವಣೆಯ ಫಲಿತಾಂಶ ನಿನ್ನೆ ಪ್ರಕಟವಾಗಿದ್ದು 20 ವರ್ಷಗಳ ಬಳಿಕ ಬಿಜೆಪಿ ಅಧಿಕಾರ ಕಳೆದುಕೊಂಡಿದ್ದು , ಕಾಂಗ್ರೆಸ್ ಮತ್ತು ಎಸ್ ಡಿ ಪಿ ಐ ಬೆಂಬಲಿತ ಅಭ್ಯರ್ಥಿಗಳು ಜಯಬೇರಿ ಬಾರಿಸಿದ್ದಾರೆ.

ಗಂಗೊಳ್ಳಿ ಗ್ರಾಮ ಪಂಚಾಯತಿಯ ಒಟ್ಟು 33 ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಅದರಲ್ಲಿ 2ನೇ ಹಾಗೂ 6ನೇ ಕ್ಷೇತ್ರದಲ್ಲಿ ಎಸ್ ಡಿ ಪಿ ಐ ಒಟ್ಟು 7 ಜನ ತನ್ನ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಸ್ಪರ್ಧಿಸಿದ ಆ ಏಳೂ ಜನ ಅಭ್ಯರ್ಥಿಗಳು ಜಯ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

2ನೇ ವಾರ್ಡಿನಲ್ಲಿ ಎಸ್ ಡಿ ಪಿ ಐ ಬೆಂಬಲಿತ ಅಭ್ಯರ್ಥಿಗಳಾದ ತಬ್ರೇಜ್ ಗಂಗೊಳ್ಳಿ, ರಜ್ಜಬ್ ಬುಡ್ದಾ, ಅಬೂಬಕರ್ ನಾಖುದಾ ಹಾಗೂ ಶರೀನಾ ಜಯಗಳಿಸಿದರೆ 6ನೇ ವಾರ್ಡಿನಿಂದ ಮೋಮಿನ್ ಸಮೀರ್, ಆಲ್ಬರ್ಟ್ ಫೆರ್ನಾಂಡಿಸ್ ಮತ್ತು ಜಮೀಲಾ ಜಯಗಳಿಸಿದ್ದಾರೆ.

ಕಳೆದ 20 ವರ್ಷಗಳಿಂದ ಗಂಗೊಳ್ಳಿ ಪಂಚಾಯತ್ ನಲ್ಲಿ ಬಿ ಜೆ ಪಿ ಅಧಿಕಾರದಲ್ಲಿದ್ದು ಈ ಬಾರಿ ಕಾಂಗ್ರೆಸ್ - ಎಸ್ ಡಿ ಪಿ ಐ ಮೈತ್ರಿ ಒಟ್ಟು 19 ಸ್ಥಾನಗಳನ್ನು (ಕಾಂಗ್ರೇಸ್ 12- ಎಸ್ ಡಿ ಪಿ ಐ 7) ಪಡೆಯುವ ಮೂಲಕ ಅಧಿಕಾರವನ್ನು ಗಿಟ್ಟಿಸಿಕೊಂಡಿದೆ.

Edited By : PublicNext Desk
Kshetra Samachara

Kshetra Samachara

13/12/2024 10:26 am

Cinque Terre

320

Cinque Terre

0

ಸಂಬಂಧಿತ ಸುದ್ದಿ