ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಒಳಚರಂಡಿ ಕಾಮಗಾರಿಯ ಕುರಿತು ವಿಶೇಷ ಸಭೆ ನಡೆಸಲಿ-ಕೆ.ವಿಕಾಸ್ ಹೆಗ್ಡೆ

ಕುಂದಾಪುರ: ಕುಂದಾಪುರ ಪುರಸಭೆಯ ಒಳಚರಂಡಿ ಕಾಮಗಾರಿಯ ವೆಟ್ವೆಲ್ ನಿರ್ಮಾಣಕ್ಕೆ ಅಗತ್ಯ ಭೂಮಿಯನ್ನು ಖಾಸಗಿಯವರಿಂದ ಖರೀದಿ ಮಾಡಿರುವುದರಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರವಾಗಿದೆ ಎನ್ನುವ ಪುರಸಭೆಯ ಆಡಳಿತ ಪಕ್ಷದ ಸದಸ್ಯರ ಆರೋಪ ಅವರ ಆಡಳಿತದ ವೈಫಲ್ಯತೆಯನ್ನು ಎತ್ತಿ ತೋರಿಸುತ್ತಿದೆ ಹಾಗೂ ಹಲವು ಅನುಮಾನಗಳಿಗೂ ಕಾರಣವಾಗಿದೆ.

ಈ ಭೂಮಿ ಖರೀದಿಯ ಪಾರದರ್ಶಕತೆಯ ಕುರಿತು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿದ್ದು ಅವರ ನಿವಾರಣೆಗೆ ಪುರಸಭೆಯ ಆಡಳಿತ ಅತೀ ಶೀಘ್ರ ಈ ವಿಷಯದ ಕುರಿತು ಒಂದು ವಿಶೇಷ ಸಭೆ ಕರೆಯಬೇಕು ಹಾಗೂ ಈಗಾಗಲೇ ಒಳಚರಂಡಿ ಕಾಮಗಾರಿ ಪ್ರಾರಂಭವಾಗಿ ಹಲವು ವರ್ಷಗಳೇ ಸಂದರೂ ಇನ್ನೂ ಅದಕ್ಕೆ ಅಗತ್ಯಗಳನ್ನು ಪೂರೈಸದಿರುವುದು ದೊಡ್ಡ ದುರಂತ ಆದುದರಿಂದ ಪುರಸಭೆಯ ಆಡಳಿತ ಆದಷ್ಟು ಬೇಗ ಅತೀ ಅಗತ್ಯದ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸುವಲ್ಲಿ ಕ್ರಮ ವಹಿಸಬೇಕು ಎಂದು ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ. ವಿಕಾಸ್ ಹೆಗ್ಡೆ ಆಗ್ರಹಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

30/07/2021 10:42 am

Cinque Terre

3.38 K

Cinque Terre

0

ಸಂಬಂಧಿತ ಸುದ್ದಿ