ಉಡುಪಿ: ಸಂಸದೆ ಶೋಭಾ ಕರಂದ್ಲಾಜೆ ದೀಪಾವಳಿ ಪ್ರಯುಕ್ತ ರಾಷ್ಟ್ರದ ಹಲವು ನಾಯಕಿಯರಿಗೆ ನೀಡಿದ ಸೀರೆ ಗಿಫ್ಟ್ ಗೆ ರಾಷ್ಟ್ರ ಮಟ್ಟದ ನಾಯಕಿಯರು ಮನಸೋತಿದ್ದಾರೆ.
ಸಚಿವೆ ನಿರ್ಮಲಾ ಸೀತಾರಾಮನ್ ಸೇರಿದಂತೆ ಹಲವರಿಗೆ ಕೈಮಗ್ಗದಿಂದ ನೇಯ್ದ ಉಡುಪಿ ಸೀರೆ ಗಿಫ್ಟ್ ಮಾಡಿದ್ದರು. ಸ್ಮೃತಿ ಇರಾನಿ, ಮೇನಕಾ ಗಾಂಧಿ, ಕನಿಮೋಳಿ, ಶೆಫಾಲಿ ವೈದ್ಯ, ಮೀನಾಕ್ಷಿ ಲೇಖಿ, ದೇಬಶ್ರೀ ಅವರಿಗೆ ಸೀರೆ ಗಿಫ್ಟ್ ಮಾಡಿದ್ದು, ಉಡುಪಿ ಸೀರೆಗೆ ಈಗ ಡಿಮ್ಯಾಂಡ್ ಕುದುರಿದೆ.
ಗಿಫ್ಟ್ ಪಡೆದ ನಾಯಕಿಯರಿಂದ ಟ್ವಿಟರ್ ನಲ್ಲಿ ಹರ್ಷ ವ್ಯಕ್ತವಾಗಿದೆ. ಮಾತ್ರವಲ್ಲ, ಸೀರೆ ಧರಿಸಿದ ಫೋಟೊಗಳನ್ನು ಟ್ವಿಟರ್ ನಲ್ಲಿ ಈ ನಾಯಕಿಯರು ಹಂಚಿಕೊಂಡಿದ್ದಾರೆ.
ಉಡುಪಿ ಶ್ರೀ ಕೃಷ್ಣ ದೇವರಿಗೂ ಇದೇ ಸೀರೆಯಲ್ಲಿ ಅಲಂಕಾರ ಮಾಡುತ್ತಾರೆ ಎಂದು ಶೋಭಾ ಕೂಡ ಟ್ವೀಟ್ ಮಾಡಿದ್ದಾರೆ.
Kshetra Samachara
18/11/2020 05:46 pm