ಬೈಂದೂರು: ವಿಶೇಷ ಚೇತನರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಬೈಂದೂರು ಕ್ಷೇತ್ರದ ಶಾಸಕರಾದ ಶ್ರೀ ಬಿ. ಎಮ್. ಸುಕುಮಾರ ಶೆಟ್ಟಿಯವರು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ
ಕುಸುಮ ಕೋಂ. ಮಹಾಬಲ, ಗೋಳಿಹೊಳೆ ಗ್ರಾಮ 25,000/- ಶ್ರೀ ಗಂಗಾಧರ ಬಿನ್ ಮಂಜಯ್ಯ ಹುದಾರ್, ಗೋಳಿಹೊಳೆ ಗ್ರಾಮ 40,000/-, ಸಮೃದ್ಧಿ ಬಿನ್ ಅಣ್ಣಪ್ಪ, ಬಂಡಿಸಾರ್ ಮನೆ, ಉಪ್ಪುಂದ 1,20,000/-, ಶ್ರೀ ನಾಗೇಶ್ ಜಿ. ರಾವ್ ಬಿನ್ ಜಗದೀಶ್ ರಾವ್, ಚೌಕುಳಮಕ್ಕಿ, ಆಜ್ರಿ 35,000/-, ಅನ್ವೀತ ಬಿನ್ ಅಶ್ವಿನಿ ಖಾರ್ವಿ, ಉಪ್ಪುಂದ ಗ್ರಾಮ 79,000/- ಇವರಿಗೆ ಶ್ರವಣ ಸಾಧನವನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಬೈಂದೂರು ಮಂಡಲ ಅಧ್ಯಕ್ಷರಾದ ದೀಪಕ ಕುಮಾರ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಶಂಕರ ಪೂಜಾರಿ, ಆನಂದ ಖಾರ್ವಿ, ರಾಜೀವ ಶೆಟ್ಟಿ ಹಟ್ಟಿಯಂಗಡಿ, ವಂಡ್ಸೆ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ನಾಗರಾಜ ನಾರ್ಕಳಿ, ಸಿದ್ದಾಪುರ ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಪ್ರವೀಣ ಶೆಟ್ಟಿ ಕೊಡ್ಲಾಡಿ, ಆಜ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಶೋಕ ಕುಲಾಲ್, ಮಂಡಲ ಉಪಾಧ್ಯಕ್ಷ ಸಾಮ್ರಾಟ್ ಶೆಟ್ಟಿ ಹಳ್ನಾಡು, ಭೋಜರಾಜ್ ಶೆಟ್ಟಿ ಉಪಸ್ಥಿತರಿದ್ದರು.
Kshetra Samachara
23/06/2022 04:41 pm