ಬೈಂದೂರು : ಯಕ್ಷಗಾನದ ದ್ಯುಮಣಿ ರತ್ನ ಶ್ರೀಧರ್ ಗಾಣಿಗ ಉಪ್ಪುಂದ ಇವರು ಶ್ರೀ ರಾಮಗಾಣಿಗ ಹಾಗೂ ಗಿರಿಜಾ ಗಾಣಿಗ ಇವರ ಗರ್ಭಬುದಿಯಲ್ಲಿ 1973ರಲ್ಲಿ ಜನಿಸಿದರು ಬಾಲ್ಯದಲ್ಲಿ ಅತೀ ಹೆಚ್ಚು ಯಕ್ಷಗಾನದಲ್ಲಿ ಆಸಕ್ತಿ ಉಳ್ಳಂತ ಇವರನ್ನು ಯಕ್ಷಮಾತೆ ಇವರನ್ನು ಕೈ ಬೀಸಿ ಕರೆದಳು.
ಪ್ರಾಥಮಿಕ ಶಿಕ್ಷಣವನ್ನು ಮಟುಕುಗೊಳಿಸಿ, ಹೆರಂಜಾಲು ವೆಂಕಟರಮಣ ಗಾಣಿಗ ಹಾಗೂ ಸುಬ್ಬಣ್ಣ ಗಾಣಿಗ ಇವರಿಂದ ಯಕ್ಷ ಶಿಕ್ಷಣವನ್ನು ಶಾಸ್ತ್ರೀಯವಾಗಿ ಅಭ್ಯಾಸ ಮಾಡಿ ತನ್ನ 15ನೆ ವಯಸ್ಸಿಗೆ ಯಕ್ಷಗಾನಕ್ಕೆ ಪಾದರ್ಪಣೆ ಮಾಡಿದರು ಹಿರಿಯ ಕಲಾವಿದರಿಂದ ರಂಗದಲ್ಲಿನ ಸೂಕ್ಷ್ಮತೆ, ರಂಗ ನೆಡೆ, ವಾಕ್ಚಾತುರ್ಯ ಭಾವ ಪ್ರಕಟತೆ ರಂಗದ ನಿಲುವು ಸುಲಲಿತವಾದ ಭಾಷೆಯನ್ನು ಅಭ್ಯಾಸಸಿದರು. ಪ್ರಭುದ್ದ ಕಲಾವಿದರಾಗಿ ರೂಪುಗೊಂಡರು.
ಇವರು ಸೌಕೂರು, ಕಮಲಶಿಲೆ, ಅಮೃತೆಶ್ವರಿ, ಮಂದಾರ್ತಿಯಲ್ಲಿ 16ವರ್ಷಗಳ ಕಾಲ ಸುದೀರ್ಘ ತಿರುಗಾಟವನ್ನು ಮುಗಿಸಿ ಪ್ರಸ್ತುತ ಮಾರಣಕಟ್ಟೆ ಮೇಳದಲ್ಲಿ ವೃತ್ತಿಪರ ಕಲಾವಿದನಾಗಿ ಬ್ರಹ್ಮಲಿಂಗೇಶ್ವರನ ಸೇವೆ ಗೈಯುತ್ತಿದ್ದಾರೆ. ಇವರ ಶ್ರದ್ದೆ, ನಿಷ್ಠೆ, ಪ್ರಾಮಾಣಿಕತೆ ಇನ್ನೊಬ್ಬರಿಗೆ ಮಾದರಿ. ಇವರು ದೇವಿ, ಬ್ರಹ್ಮರಕುಂತಳೆ, ಶಶಿಪ್ರಭೆ, ಮೀನಾಕ್ಷಿ, ಮದನಾಕ್ಷಿ, ಸುಭದ್ರೆ, ದ್ರೌಪದಿ, ರುಕ್ಮಿಣಿ, ಸತ್ಯಭಾಮೆ ಮುಂತಾದ ವೇಷಗಳನ್ನು ಮಾಡಿ ಜನರಿಂದ ಮೆಚ್ಚುಗೆ ಪಡೆದುಕೊಂಡು ಜನ ಮನ್ನಣೆಗೆ ಪಾತ್ರರಾದರು ಜನರ ಮನೆ ಮಾತಾದರು.
ಇವರು ಸಂಗತಿ ಯಾಗಿ ಮಡದಿ ಸುಮಿತ್ರಾ ಇವರ ದಾಂಪತ್ಯದ ಪ್ರತೀಕವಾಗಿ ಶ್ರೇಯ, ಚಿರಾಗ್ ಇಬ್ಬರು ಮಕ್ಕಳನ್ನು ಪಡೆದು ಸಾರ್ಥಕ ಜೀವನ ನೆಡೆಸುತ್ತಿದ್ದಾರೆ. ಇವರ ಪ್ರತಿಭೆಯನ್ನು ಗುರುತಿಸಿ ಅನೇಕ ಸಂಘ ಸಂಸ್ಥೆಗಳು ಪ್ರಶಸ್ತಿ ಪ್ರಧಾನ ಮಾಡಿವೆ. 2021ನೆ ಜಿಲ್ಲಾ ರಾಜ್ಯೋಸ್ತವ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಕೆ ಇವರದ್ದು. ಇವರಿಗೆ ಇವರ ಕುಲ ದೇವರಾದ ವೇಣುಗೋಪಾಲ ಸ್ವಾಮೀಯು ಆಯುಷ್ಯ ಅರೋಗ್ಯ ಕರುಣಿಸುದರ ಜೊತೆಯಲ್ಲಿ ಇನ್ನು ಹೆಚ್ಚಿನ ಕಲಾ ಸೇವೆಯನ್ನು ಮಾಡುವ ಭಾಗ್ಯ ದೇವರು ಕರುಣಿಸಲಿ ಎಂದು ಯಕ್ಷ ಪ್ರಿಯರು ಹಾಗೂ ನೆಟ್ಟಿಗರು ಹಾರೈಸಿದರು.
Kshetra Samachara
04/05/2022 01:04 pm