ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಸರಕಾರದ ಉಚಿತ ಪಡಿತರವನ್ನು ಮಾರಾಟ ಮಾಡಿದರೆ ಕಾರ್ಡ್ ರದ್ದು: ಜಿಲ್ಲಾಧಿಕಾರಿ.

ಬೈಂದೂರು: ಇನ್ನು ಮುಂದೆ ಸಾರ್ವಜನಿಕ ಪಡಿತರ ವ್ಯವಸ್ಥೆಯ ಅಡಿಯಲ್ಲಿ ಸಿಗುವ ಉಚಿತ ಪಡಿತರ ಆಹಾರ ದಾನ್ಯ ಪಡೆದು ಇತರರಿಗೆ ಮಾರಾಟ ಮಾಡುವವರ ಪಡಿತರ ಚೀಟಿ ರದ್ದುಗೊಳಿಸಲು ಇಲಾಖೆ ಮುಂದಾಗಿದೆ.

ಸಾರ್ವಜನಿಕ ಪಡಿತರದಲ್ಲಿ ಕರಾವಳಿ ಜಿಲ್ಲೆಗಳಿಗೆ ಹೆಚ್ಚಾಗಿ ಬೆಳ್ತಿಗೆ ಅಕ್ಕಿಯನ್ನು ನೀಡುತ್ತಿದ್ದು, ಹಲವರು ತಮಗೆ ಬೇಕಾದಷ್ಟು ಅಕ್ಕಿಯನ್ನು ಇರಿಸಿಕೊಂಡು ಉಳಿದುದನ್ನು 1ಕೆ.ಜಿ. ಗೆ 10 ರಿಂದ 12 ರೂ. ನಂತೆ ಮಾರಾಟ ಮಾಡುತ್ತಾರೆ. ಈ ಬಗ್ಗೆ ಮಾಹಿತಿ ದೊರೆತಲ್ಲಿ ತಾಲೂಕಿನ ಆಹಾರ ನಿರೀಕ್ಷಕರ ಮೂಲಕ ದಾಳಿ ನಡೆಸಿ ಅಕ್ಕಿಯನ್ನು ವಶಪಡಿಸಿಕೊಂಡು ಕಾರ್ಡ್‌ ಕೂಡಾ ರದ್ದು ಮಾಡುವ ಅಧಿಕಾರ ಇಲಾಖೆ ಅಧಿಕಾರಿಗಳಿಗೆ ಇದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಪಡಿತರ ಆಹಾರ ಧಾನ್ಯ ಮಾರಾಟ ಮಾಡುತ್ತಿರುವ ಮಾಹಿತಿ ದೊರೆತಲ್ಲಿ ತಕ್ಷಣ ಸಾರ್ವಜನಿಕರು 1967 ಅಥವಾ ತಹಶೀಲ್ದಾರ್‌ ಕಚೇರಿ/ ಉಪನಿರ್ದೇಶಕರ ಕಚೇರಿಗೆ ದೂರು ಸಲ್ಲಿಸಬೇಕಾಗಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್‌ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

28/04/2022 01:00 pm

Cinque Terre

742

Cinque Terre

0

ಸಂಬಂಧಿತ ಸುದ್ದಿ