ಕುಂದಾಪುರ :ಸಂಬಂಧ ಕುದುರಿಸುವ ನೇಪದಲ್ಲಿ ಸುಬ್ರಹ್ಮಣ್ಯ ಹೆಬ್ಬಾರ್ ಎಂಬವರಿಗೆ ಮಹಿಳೆ 90 ಸಾವಿರ ವಂಚಿಸಿದ ಘಟನೆ ಬೈಂದೂರು ಸಮೀಪದ ಗಂಗೊಳ್ಳಿ ಎಂಬಲ್ಲಿ ನಡೆದಿದೆ.
ಸುಬ್ರಹ್ಮಣ್ಯ ಹೆಬ್ಬಾರ್ ತಮ್ಮ ಮದುವೆ ಸಲುವಾಗಿ ಬ್ರೋಕರ್ ಗೀತಾ ಹೆಗಡೆ ಎಂಬಾತಳಿಗೆ ಸಂಪರ್ಕಿಸಿ ಹುಡುಗಿ ಇದಲ್ಲಿ ತಿಳಿಸುವಂತೆ ಕೇಳಿಕೊಂಡಿದ್ದಾನೆ.2021 ರ ನವೆಂಬರ್ ಮೊದಲ ವಾರ ಗೀತಾ ಹೆಗ್ಡೆ ಕರೆ ಮಾಡಿ ಹುಡುಗಿ ಇರುವುದಾಗಿ ತಿಳಿಸಿ ಮದುವೆ ಮಾತುಕತೆ ಬರುವಂತೆ ಹೇಳಿದ್ದಾರೆ.
ನಂತರ ಸುಬ್ರಹ್ಮಣ್ಯ ಅವರ ತಮ್ಮ, ಅಕ್ಕ, ತಂದೆ, ತಾಯಿ ಜೊತೆಗೆ ಗೀತಾರವರ ಮನೆಗೆ ಹೋಗಿ ಮಾತುಕತೆ ನೆಡೆಸಿ ಮದುವೆಗೆ ಒಪ್ಪಿದ್ದಾರೆ. ಈ ಬಗ್ಗೆ ಗೀತಾ ಹೆಗ್ಡೆ ಸುಬ್ರಹ್ಮಣ್ಯರವರಿಗೆ ನಿಶ್ಚಿತಾರ್ಥವಾದ ನಂತರ 90,000 ರೂ ಹಾಗೂ ಮದುವೆ ಬಳಿಕ 90,000 ರೂ ನೀಡುವಂತೆ ಕೇಳಿದ್ದರು.2021 ನವೆಂಬರ್ 17 ರಂದು ಬೈಂದೂರು ತಾಲೂಕು ನಾಡ ಗ್ರಾಮ ಪಡುಕೋಣೆಯಲ್ಲಿ ನಿಶ್ಚಿತಾರ್ಥವಾಗಿದೆ.
ಬಳಿಕ ಸುಬ್ರಹ್ಮಣ್ಯರವರು 90,000 ವರ್ಗಾವಣೆ ಮಾಡಿದ್ದಾರೆ. ನಿಶ್ಚಿತಾರ್ಥವಾದ 4 ದಿನಗಳ ಬಳಿಕ ಸುಬ್ರಹ್ಮಣ್ಯರವರಿಗೆ ಕರೆ ಮಾಡಿದ ಹುಡುಗಿ ನಾನು ಬೇರೆ ಜಾತಿಯವಳು ನನಗೆ ಈ ಮದುವೆ ಇಷ್ಟವಿಲ್ಲ ಬೇರೆ ಮದುವೆ ಮಾಡಿಕೊಳ್ಳಿ ಎಂದು ತಿಳಿಸಿದ್ದಾಳೆ. ನಂತರ ಸುಬ್ರಹ್ಮಣ್ಯರವರು ಬ್ರೋಕರ್ ಗೀತಾರವರಿಗೆ ಕರೆ ಮಾಡಿ ತಾನು ಕೊಟ್ಟ ದುಡ್ಡನ್ನು ವಾಪಾಸ್ ಕೊಡುವಂತೆ ಹೇಳಿದ್ದಾರೆ. ನಂತರ ಗೀತಾರವರು ಮೋಸ ಮಾಡಿರುವುದು ಬೆಳಕಿಗೆ ಬಂದಿದ್ದು,ಸುಬ್ರಹ್ಮಣ್ಯರವರ ದೂರಿನಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
21/04/2022 11:46 am