ಉಡುಪಿ: ಉಡುಪಿಯ ಸುಪ್ರಸಿದ್ಧ ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ ಮತ್ತು ಲಕ್ಷ್ಮೀ ಹರಿಶ್ಚಂದ್ರ ಅವರು ಇಂದು ನಿಟ್ಟೂರು ಕನ್ನಡ ಮಾಧ್ಯಮ ಶಾಲೆಗೆ ಆಗಮಿಸಿ ಕನ್ನಡ ಮಾಧ್ಯಮದಲ್ಲಿ ಸಂಪೂರ್ಣ ಉಚಿತವಾಗಿ ಶಿಕ್ಷಣ ನೀಡುತ್ತಿರುವ ಸಂಸ್ಥೆಗೆ ವಿಶೇಷ ರೀತಿ ನೆರವು ನೀಡಿದರು.
ಸಾಮಾಜಿಕ ಕಳಕಳಿ ಹೊಂದಿದ ಇವರು ‘ಪoಚಮಿ ಟ್ರಸ್ಟ್’ ಮೂಲಕ ಅರ್ಥಪೂರ್ಣ ಕಾರ್ಯಕ್ರಮ ಉಡುಪಿಯ ಜನತೆಗೆ ಮೌನವಾಗಿ ನೀಡುತ್ತಾ ಬಂದಿದ್ದಾರೆ. ಗಾಂಧಿ ಆಸ್ಪತ್ರೆ ಸ್ಥಾಪನೆಗೊಂಡು ಇಂದಿಗೆ 25 ವರ್ಷ ಪೂರ್ಣಗೊಂಡಿರುವುದನ್ನು ಧನ್ಯತೆಯಿಂದ ಸ್ಮರಿಸಿಕೊಳ್ಳಬಹುದು. ಇವರ ಸಹೋದರ ಮಡಾಮಕ್ಕಿ ಅನಂತ ಭಟ್ ಶಾಲೆಯ ಹಳೆವಿದ್ಯಾರ್ಥಿ.
Kshetra Samachara
05/10/2020 10:57 pm