ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ ಆರಂಭವಾಗಲಿರುವ MRF ಯೋಜನೆಯನ್ನು ಗ್ರಾಮ ಮಟ್ಟದಲ್ಲಿ ಪರಿಣಾಮಕಾರಿಯನ್ನಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಕಸ ವಿಂಗಡಣೆ ಜಾಗೃತಿಗಾಗಿ ಮನೆ-ಮನೆ ಭೇಟಿ ಅಭಿಯಾನ ನಡೆಯುತ್ತಿದೆ.
ಈ ಸಂಬಂಧ ಸ್ವಚ್ಛತಾ ಸಿಬ್ಬಂದಿಗೆ 2 ದಿನಗಳ ತರಬೇತಿ ಕಾರ್ಯಾಗಾರ ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಥಮ ದಿನದ ತರಬೇತಿ ಕಾರ್ಯಾಗಾರದಲ್ಲಿ 40 ಜನ ಸ್ವಚ್ಛಗ್ರಹಿಗಳು ಭಾಗವಹಿಸಿದ್ದು, ಅವರಿಗೆ MRF ಹಾಗೂ ಕಸ ವಿಂಗಡಣೆ ಮತ್ತು ಹಸಿ ತ್ಯಾಜ್ಯದ ನಿರ್ವಹಣೆ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು. ಜಿಪಂ ಮುಖ್ಯ ಯೋಜನಾಧಿಕಾರಿ ಹಾಗೂ ಜಿಲ್ಲಾ ಸಮಾಲೋಚಕರು ಉಪಸ್ಥಿತರಿದ್ದರು.
ಸಾಹಸ್ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಮೂರ್ತಿ ಯವರು MRF ನ ಬಗ್ಗೆ ಹಾಗೂ ರಾಮಕೃಷ್ಣ ಮಿಷನ್ ಸಂಸ್ಥೆಯ ರಂಜನ್ ಅವರು pot ಕಾಂಪೋಸ್ಟ್ ಬಗ್ಗೆ ಮಾಹಿತಿ ನೀಡಿದರು.
Kshetra Samachara
21/09/2020 10:30 pm