ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಣ್ಣ ಬಣ್ಣಗಳ ವೈಭವ, ಬೈಂದೂರು ಉತ್ಸವದಲ್ಲಿ ಅದ್ದೂರಿ ಬೀಚ್ ಉತ್ಸವ

ಬೈಂದೂರು: ನವೆಂಬರ್ 1,2,3 ರಂದು ನಡೆಯುವ ಬೈಂದೂರು ಉತ್ಸವದಲ್ಲಿ ಸೋಮೇಶ್ವರ ಪಡುವರಿ ಬೀಚ್ ನಲ್ಲಿ ವಿಶೇಷ ಆಕರ್ಷಣೆಯೊಂದಿಗೆ ಬೀಚ್ ಉತ್ಸವ ನಡೆಯಲಿದೆ.

ಸಮೃದ್ಧ ಬೈಂದೂರು ಪರಿಕಲ್ಪನೆಯಡಿಯಲ್ಲಿ ನಡೆಯುವ ಉತ್ಸವದಲ್ಲಿ ಬೈಂದೂರಿನ ಗ್ರಾಮಿಣ ಕಲೆ, ಸಂಸ್ಕೃತಿಗಳನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಹೂಡಿಕೆದಾರರನ್ನು ಸೆಳೆದು ಕ್ಷೇತ್ರದ ಅಭಿವೃದ್ಧಿಗೆ ಅವಕಾಶ ಸೃಷ್ಟಿಸುವ ಉದ್ದೇಶದಿಂದ

ಬೈಂದೂರು ಉತ್ಸವ ನಡೆಯಲಿದೆ.

ನವಂಬರ್ 1ರಿಂದ 3ರ ವರೆಗೆ ನಡೆಯುವ ಉತ್ಸವದಲ್ಲಿ ಪ್ರತಿ ದಿನ ಬೆಳಿಗ್ಗೆ ಇಂದ ಸಂಜೆಯ ತನಕ ನಡೆಯುವ ಬೀಚ್ ಉತ್ಸವದಲ್ಲಿ ವಿವಿಧ ಜಲ ಕ್ರೀಡೆ ನಡೆಯಲಿದೆ. ಸ್ಪೀಡ್ ಬೋಟ್, ಬನಾನ ರೈಡ್, ಪ್ಲೇ ಬೋರ್ಡ್, ಸೈಕಲ್ ಪೆಡ್ಲಿಂಗ್, ಪ್ಲೇ ಜೆಟ್ ಹಾಗೂ ವಿವಿಧ ಮನೋರಂಜನೆಯ ಕ್ರೀಡೆಗಳು ನಡೆಯಲಿದೆ.

ಬೀಚ್ ಉದ್ದಕ್ಕೂ ಆಕರ್ಷಣೀಯ ಲೈಟಿಂಗ್ ಎಲ್ಲರ ಗಮನ ಸೆಳೆಯಲಿದೆ. ನ. 1ರಂದು ಕನ್ನಡ ರಥೋತ್ಸವದೊಂದಿಗೆ 28 ಇಲಾಖೆಗಳ ಹಾಗೂ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ವಿಶೇಷತೆಗಳೊಂದಿಗೆ ಆಕರ್ಷಣೀಯ ಟ್ಯಾಬ್ಲೊ ಹಾಗೂ ವಿವಿಧ ಭಜನಾ ತಂಡಗಳಿಂದ ಭಜನಾ ಕುಣಿತ ಮೆರವಣಿಗೆ ನಡೆಯಲಿದೆ.

ಬೈಂದೂರು ಉತ್ಸವದಲ್ಲಿ ವಿವಿಧ ಇಲಾಖೆಗಳ ಮಾಹಿತಿ ಕಾರ್ಯಗಾರ, ವಿಜ್ಞಾನ ವಸ್ತು ಪ್ರದರ್ಶನ, ಬೈಂದೂರು ಕ್ಷೇತ್ರದ ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಹಿನ್ನೆಲೆಗಳ ವಿಚಾರಗೋಷ್ಠಿ, ಕವಿಗೋಷ್ಠಿ, ಕಂಬಳ, ನಾಟಕ, ಯಕ್ಷಗಾನ, ಕ್ರಷಿ ಇಲಾಖೆಗಳ ಮಾಹಿತಿ, ಆಹಾರ ಮೇಳ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Edited By : PublicNext Desk
Kshetra Samachara

Kshetra Samachara

22/10/2024 04:34 pm

Cinque Terre

214

Cinque Terre

0

ಸಂಬಂಧಿತ ಸುದ್ದಿ