ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ : ಪರಿಷತ್ ಉಪಚುನಾವಣೆ ಮತಗಟ್ಟೆಗೆ ಜಿಲ್ಲಾಧಿಕಾರಿ ಬೇಟಿ

ಬ್ರಹ್ಮಾವರ: ಕೋಟ ಶ್ರೀನಿವಾಸ ಪೂಜಾರಿ ಸಂಸದರಾಗಿ ಚುನಾಯಿತರಾದ ಹಿನ್ನೆಲೆ ತೆರವಾದ ವಿಧಾನ ಪರಿಷತ್ ಸ್ಥಾನಕ್ಕೆ ಸೋಮವಾರ ಉಪಚುನಾವಣೆ ಮತದಾನ ನಡೆದಿದೆ.

ಗ್ರಾಮ ಪಂಚಾಯತಿಯಲ್ಲಿ ಅತಿ ಹೆಚ್ಚು ಸದಸ್ಯ ಬಲ ಇರುವ ಬ್ರಹ್ಮಾವರ ತಾಲೂಕಿನ ಚಾಂತಾರು ೨೬, ಹಂದಾಡಿ ೧೮, ವಾರಂಬಳ್ಳಿ ೧೮, ಗ್ರಾಮಪಂಚಾಯತಿ ಸದಸ್ಯ ಮತದಾರರು ಸರತಿಯ ಸಾಲಿನಲ್ಲಿ ನಿಂತು ಬೆಳಿಗ್ಗೆ ಮತ ಚಲಾಯಿಸಿದರು. ನಿಕಟಪೂರ್ವ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಾಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯತಿಯಲ್ಲಿ ಮತದಾನ ಮಾಡಿದರು.

ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಇಲ್ಲಿನ ಗ್ರಾಮ ಪಂಚಾಯತಿಗಳಾದ ವಾರಂಬಳ್ಳಿ, ಹಂದಾಡಿ, ಚಾಂತಾರು, ಕುಂಜಾಲು, ನೀಲಾವರ, ಪೇತ್ರಿಯ ಮತಗಟ್ಟೆಗಳಿಗೆ ಭೇಟಿ ನೀಡಿದರು.

ಬ್ರಹ್ಮಾವರ ತಹಶೀಲ್ದಾರ ಶ್ರೀಕಾಂತ್ ಎಸ್ ಹೆಗ್ಡೆ ಕಂದಾಯ ನೀರೀಕ್ಷಕ ರಾಜು ಜಿಲ್ಲಾಧಿಕಾರಿ ಜೊತೆಯಲ್ಲಿದ್ದರು. ತಾಲೂಕಿನಲ್ಲಿ ಒಟ್ಟು ಮತಗಟ್ಟೆಗಳು ೨೮, ಮತಗಟ್ಟೆಗೆ ಚುನಾವಣಾ ಸಿಬ್ಬಂದಿ ೧೧೬, ಒಟ್ಟು ಮತದಾರರು ೪೨೮, ಹಾಗೂ ೨ ಸೂಕ್ಷ್ಮ ಮತಗಟ್ಟೆಗಳು ಇದ್ದು ಬಹತೇಕ ಶಾಂತಿಯುತವಾಗಿ ಮತದಾನ ನಡೆದಿದೆ.

Edited By : Suman K
Kshetra Samachara

Kshetra Samachara

21/10/2024 02:58 pm

Cinque Terre

2.2 K

Cinque Terre

0

ಸಂಬಂಧಿತ ಸುದ್ದಿ