ಉಡುಪಿ: ಕೇಂದ್ರ ಸರಕಾರ ಬ್ಯಾಂಕುಗಳ ವಿಲೀನ ಮಾಡಿದ ನಂತರ ಜನಸಾಮಾನ್ಯರು ಸಮಸ್ಯೆ ಎದುರಿಸುವಂತಾಗಿದೆ.
ಅದರಲ್ಲೂ ಈ ಕೊರೊನಾ ಕಾಲದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿ ನಾಗರಿಕರ, ಹಿರಿಯರ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ.
ಬ್ಯಾಂಕ್ ವಿಲೀನದ ನಂತರ ಬದಲಾದ ಖಾತೆ ಸಂಖ್ಯೆಗಳನ್ನು ಪಡೆಯಲು ಬ್ಯಾಂಕ್ ಗೆ ಬನ್ನಿ ಎಂದು ಅಂಚೆ ಮೂಲಕ ಬ್ಯಾಂಕ್ ನವರು ಗ್ರಾಹಕರಿಗೆ ಪತ್ರ ಕಳುಹಿಸುತ್ತಿದ್ದಾರೆ.
ಇದರ ಪರಿಣಾಮವಾಗಿ ಬ್ಯಾಂಕ್ ಗಳಲ್ಲಿ ಹೊಸ ಅಕೌಂಟ್ ಪಡೆಯಲು ಗ್ರಾಹಕರ ನೂಕುನುಗ್ಗಲು ದೃಶ್ಯ ಸಾಮಾನ್ಯವಾಗಿದೆ.
ಕೇವಲ ಬ್ಯಾಂಕ್ ನ ಖಾತೆ ಮತ್ತು ಐಎಫ್ಎಸ್ ಸಿ ಕೋಡ್ ಬದಲಾಗಿರುವುದರ ಮಾಹಿತಿ ಕಳುಹಿಸಿದ ಅಂಚೆಯಲ್ಲೇ ಪಾಸ್ ಪುಸ್ತಕವನ್ನು ಮುದ್ರಿಸಿ ರಿಜಿಸ್ಟರ್ಡ್ ಪೋಸ್ಟ್ ಮೂಲಕ ಕಳುಹಿಸಿದ್ದರೆ ಎಲ್ಲ ಸಮಸ್ಯೆಯೂ ಪರಿಹಾರವಾಗುತ್ತಿತ್ತಲ್ಲವೇ? ಎಂಬುದು ಗ್ರಾಹಕರ ಪ್ರಶ್ನೆಯಾಗಿದೆ.
Kshetra Samachara
10/10/2020 05:30 pm