ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ವಂಡಾರಿನಲ್ಲಿ ಸಿಡಿಲಾಘಾತದಿಂದ ಯುವ ಎಂಜಿನಿಯರ್ ಸಾವು

ಉಡುಪಿ: ರಾತ್ರಿ ಸುರಿದ ಭಾರಿ ಮಳೆ ಮಧ್ಯೆ ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟ ಘಟನೆ ಕೋಟ ಬಳಿ ನಡೆದಿದೆ.

ಬ್ರಹ್ಮಾವರ ತಾಲೂಕು ವಂಡಾರಿನ ಬೋರ್ಡ್ ಕಲ್ಲಿನ ನಿವಾಸಿ ಸಾಫ್ಟ್ ವೇರ್ ಎಂಜಿನಿಯರ್ ಚೇತನ್ (24) ಮೃತಪಟ್ಟ ಯುವಕ.

ಮನೆಯೊಳಗಡೆ ಲ್ಯಾಪ್ ಟಾಪ್‌ನಲ್ಲಿ ಕೆಲಸ ನಿರ್ವಹಿ ಸುತ್ತಿದ್ದ ಅವರು ಸಿಡಿಲಿನ ಹೊಡೆತಕ್ಕೆ ಒಳಗಾಗಿ ಗಂಭೀರವಾಗಿ ಅಸ್ವಸ್ಥರಾಗಿದ್ದರು.

ತತ್‌ಕ್ಷಣ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪೆನಿಯ ಉದ್ಯೋಗಿಯಾಗಿದ್ದ ಚೇತನ್, ಕೊರೊನಾ ದಾಳಿ ಬಳಿಕ ಮನೆಯಿಂದಲೇ ಕರ್ತವ್ಯ ನಿರ್ವಹಿಸುತ್ತಿದ್ದರು.

ಮೃತ ಚೇತನ್ ಬಡತನದಲ್ಲಿಯೇ ಸಾಕಷ್ಟು ಕಷ್ಟಪಟ್ಟು ಎಂಜಿನಿಯರಿಂಗ್ ಪದವಿ ಮುಗಿಸಿ, ಮನೆಗೆ ಆಧಾರ ವಾಗಿದ್ದರು. ಅಕಾಲಿಕ ಮಳೆಯ ಅವಾಂತರದಿಂದಾಗಿ ಅವರು ಹೆತ್ತವರು ಮತ್ತು ಸಹೋದರಿಯನ್ನು ಅಗಲಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

11/12/2020 12:46 pm

Cinque Terre

14.04 K

Cinque Terre

4

ಸಂಬಂಧಿತ ಸುದ್ದಿ